ಪಿಳಿಕುಳದಲ್ಲಿ ಅನೈತಿಕ ಪೊಲೀಸ್‍ಗಿರಿ : ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಖಂಡನೆ
ಮಂಗಳೂರು,ಜ.2:ಮಂಗಳೂರಿನ ಪಿಳಿಕುಳದಲ್ಲಿ ವಿದ್ಯಾರ್ಥಿಗಳ ಮೇಲೆ ಸಂಘಪರಿವಾರದಿಂದ ನಡೆದ ಅನೈತಿಕ ಪೊಲೀಸ್‍ಗಿರಿಯನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ.ಕ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸಿದೆ.
ಜಿಲ್ಲೆಯಲ್ಲಿ ಸಂಘಪರಿವಾರದ ಶಕ್ತಿಗಳು ಮತೀಯ ಗಲಭೆಗಳನ್ನು ಸೃಷ್ಟಿಸುವ ಉದ್ದೇಶದಿಂದ ಅನೈತಿಕ ಪೊಲೀಸ್‍ಗಿರಿಯು ನಡೆಯುತ್ತಿದ್ದು. ಇತ್ತೀಚೆಗೆ ಗುರುಪುರದ ವಜ್ರದೇಹಿ ಮಠದ ಸ್ವಾಮೀಜಿಯೊಬ್ಬರು ಅನೈತಿಕ ಪೊಲೀಸ್‍ಗಿರಿಗೆ ಪ್ರತ್ಯೇಕ ಟಾಸ್ಕ್ ಫೋರ್ಸ್ ಸ್ಥಾಪಿಸಿ ಎಂಬ ಪ್ರಚೋದನೆಕಾರಿ ಹೇಳಿಕೆ ನೀಡಿದ್ದರು ಇದರ ಪರಿಣಾಮವಾಗಿ ನೈತಿಕಪೊಲೀಸ್‍ಗಿರಿಯು ವ್ಯವಸ್ಥಿತವಾಗಿ ನಡೆಯುತ್ತಿದೆ. ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆಯನ್ನು ದಾಖಲಿಸಿಬೇಕು ಅಲ್ಲದೆ ನೈತಿಕ ಪೊಲೀಸ್ ಗಿರಿಯ ವಿರುದ್ದ ಕಠಿಣ ಕಾಯ್ದೆಯನ್ನು ಶೀಘ್ರ ಜಾರಿಮಾಡಬೇಕು ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಆಗ್ರಹಿಸಿದೆ.
ಪಿಳಿಕುಳದಲ್ಲಿ ನಡೆದ ಘಟನೆಯನ್ನು ಖಂಡಿಸಿ ಜ.3ರಂದು ವಾಮಂಜೂರಿನಲ್ಲಿ ಕ್ಯಾಂಪಸ್ ಫ್ರಂಟ್ ದ.ಕ ಸಮಿತಿಯ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.