ಅಕ್ರಮ ಮರಳು ಸಾಗಾಟ; ಟಿಪ್ಪರ್ ಮತ್ತು ಮರಳು ವಶ
Update: 2018-01-02 19:37 IST
ಹೊನ್ನಾವರ,ಜ.2: ತಾಲೂಕಿನ ಹೊಸಪಟ್ಟಣ ಕ್ರಾಸ್ ಬಳಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ಮತ್ತು ಸುಮಾರು 15 ಸಾವಿರ ರೂ. ಮೌಲ್ಯದ ಮರಳನ್ನು ಸೋಮವಾರ ತಡರಾತ್ರಿ ಕಂದಾಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಕಂದಾಯ ನಿರೀಕ್ಷಕ ಮಂಜುನಾಥ ಸುಬ್ರಾಯ ನಾಯ್ಕ ಹೊಸಪಟ್ಟಣ ಕ್ರಾಸ್ ಬಳಿ ಸರ್ಕಾರಿ ವಾಹನದಲ್ಲಿ ಹೋಗುತ್ತಿದ್ದಾಗ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ (ಕೆಎ12.9258)ನ್ನು ತಡೆಯಲು ಸೂಚಿಸಿದ್ದರು. ಟಿಪ್ಪರ್ ಚಾಲಕ ಹಾಗೂ ಸಹಾಯಕ ಟಿಪ್ಪರನ್ನು ಸರ್ಕಾರಿ ವಾಹನಕ್ಕೆ ಢಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿಪಡಿಸಿ ಪರಾರಿಯಾಗಿದ್ದಾರೆ. ಈ ಕುರಿತು ಕಂದಾಯ ಅಧಿಕಾರಿಗಳು ಮಂಕಿ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.