ಮನಪಾ ಮುಂದಿನ ಮೇಯರ್,ಉಪ ಮೇಯರ್ ಸಾಮಾನ್ಯ ವರ್ಗಕ್ಕೆ ಮೀಸಲು
Update: 2018-01-02 20:33 IST
ಮಂಗಳೂರು,ಜ.2:ಮಂಗಳೂರು ಮಹಾನಗರ ಪಾಲಿಕೆಯ ಮುಂದಿನ ಮೇಯರ್ ಉಪ ಮೇಯರ್ ಆಯ್ಕೆಗೆ ಸಂಬಂಧಿಸಿದಂತೆ ಸರಕಾರ ಮೀಸಲಾತಿ ಆದೇಶ ಹೊರಡಿಸಿದೆ.
ಮೇಯರ್ ಮತ್ತು ಉಪ ಮೇಯರ್ ಎರಡು ಸ್ಥಾನಗಳನ್ನು ಸಾಮಾನ್ಯ ವರ್ಗಕ್ಕೆ ಮೀಸಲಿರಿಸಿ ಸರಕಾರ ಆದೇಶಿಸಿದೆ.ಹಾಲಿ ಮೇಯರ್ ಕವಿತಾ ಸನಿಲ್ ಹಾಗೂ ಉಪ ಮೇಯರ್ ರಜನೀಶ್ ಅವರು ಮಾರ್ಚ್ 8ರವರೆಗೆ ಅಧಿಕಾರದಲ್ಲಿರುತ್ತಾರೆ.ಒಂದು ವರ್ಷದ ಅವಧಿಗೆ ಹೊಸ ಮೇಯರ್ ಆಯ್ಕೆ ಮಾರ್ಚ್ 8 ಒಳಗೆ ನಡೆಯಲಿದೆ.