ಆತ್ರಾಡಿ: ಜ.4ರಂದು ‘ಆರ್ಮರ್ ಕಾರ್ಟನ್’ ಶುಭಾರಂಭ

Update: 2018-01-02 16:41 GMT

ಉಡುಪಿ, ಜ.2: ಆತ್ರಾಡಿಯ ಹಿರೇಬೆಟ್ಟು ರಸ್ತೆಯ 80-ಬಡಗುಬೆಟ್ಟುವಿನಲ್ಲಿ ನೂತನವಾಗಿ ಆರಂಭಿಸಲಾಗುವ ಕರಗೇಟೆಡ್ ಪೇಪರ್ ಬಾಕ್ಸ್‌ನ ಉದ್ಯಮ ‘ಆರ್ಮರ್ ಕಾರ್ಟನ್’ ಜ.4ರಂದು ಪೂರ್ವಾಹ್ನ 11ಕ್ಕೆ ಶುಭಾರಂಭಗೊಳ್ಳಲಿದೆ.

ಆಮದಿತ ಅತ್ಯಾಧುನಿಕ ತಂತ್ರಜ್ಞಾನದ ಯಂತ್ರೋಪಕರಣಗಳನ್ನು ಹಾಗೂ ಕೌಶಲ್ಯಪೂರ್ಣ ಕಾರ್ಮಿಕರನ್ನೊಳಗೊಂಡ ‘ಆರ್ಮರ್ ಕಾರ್ಟನ್’ ಅನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ವಿನಯ ಕುಮಾರ್ ಸೊರಕೆ, 80 ಬಡಗುಬೆಟ್ಟು ಗ್ರಾಪಂ ಅಧ್ಯಕ್ಷ ಕೆ.ಶಾಂತರಾಮ ಶೆಟ್ಟಿ, ದಿ ಮಣಿಪಾಲ್ ಗ್ರೂಪ್ ಎಂ.ಡಿ. ಟಿ.ಗೌತಮ್ ಪೈ ಭಾಗವಹಿಸುವರು.

‘ಆರ್ಮರ್ ಕಾರ್ಟನ್’ ವರ್ಷಕ್ಕೆ 2.70 ಲಕ್ಷ ಟನ್ ಕರಗೇಟೆಡ್ ಪೇಪರ್ ಬಾಕ್ಸ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಕರಗೇಟೆಡ್ ಪೇಪರ್ ಬಾಕ್ಸ್ ಕೈಗಾರಿಕೆ ಸಾಮಗ್ರಿಗಳ, ಆಹಾರ ಮತ್ತು ತೋಟಗಾರಿಕಾ ಉತ್ಪನ್ನಗಳ ಪ್ಯಾಕಿಂಗ್‌ಗೆ ಬಳಕೆಯಾಗುತ್ತದೆ. ಕಾಗದ ಮತ್ತು ಕಾಗದೋತ್ಪನ್ನಗಳನ್ನು ಪರಿವರ್ತಿಸಿ ಕೈಗಾರಿಕೆ ಕಚ್ಚಾ ಉತ್ಪನ್ನಗಳನ್ನು ಬಳಸಿ ಕರಗೇಟೆಡ್ ಪೇಪರ್ ಬಾಕ್ಸ್‌ಗಳನ್ನು ತಯಾರಿಸಲಾಗುತ್ತದೆ.

ಇದು ಪರಿಣಾಮಕಾರಿ ಕುಶನಿಂಗ್, ಭಾರವಿಲ್ಲದ, ಸುಲಭವಾಗಿ ತಯಾರಿಸುವ, ಸುಲಭವಾಗಿ ಸಂಗ್ರಹಿಸುವ, ಸುಲಭವಾಗಿ ಮುದ್ರಣ ಮತ್ತು ಜಾಹೀರಾತು ಲಾಭ ತಂದುಕೊಡುವ ಹಾಗೂ ರಫ್ತು ಮತ್ತು ಮಾರಾಟ ಇತ್ಯಾದಿಗಳಿಗೆ ಸಹಕಾರಿಯಾಗುತ್ತದೆ. ಆಹಾರ ಯೋಗ್ಯ ಎಣ್ಣೆ, ಸಂಸ್ಕರಿಸಲ್ಪಟ್ಟ ನೀರು, ಔಷಧಗಳು, ಬಿಸ್ಕತ್‌ಗಳು, ಹಾಲು ಮತ್ತು ಹಾಲಿನ ಉತ್ಪನ್ನಗಳು, ಸೋಪ್, ಕಾಸ್ಮೆಟಿಕ್ಸ್, ಟೀ ಮತ್ತು ಕಾಫಿ, ಒಳ ಉಡುಪುಗಳು, ಪಾದರಕ್ಷೆಗಳ ಪ್ಯಾಕಿಂಗ್‌ಗಳಲ್ಲಿ ಕರಗೇಟೆಡ್ ಪೇಪರ್ ಬಾಕ್ಸ್ ಬಳಕೆಯಾಗುತ್ತವೆ ಎಂದು ‘ಆರ್ಮರ್ ಕಾರ್ಟನ್’ನ ಸಮೀರ್ ಮುಹಮ್ಮದ್ ಹಾಗೂ ಕೆ.ಅಬ್ದುಲ್ಲಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News