ಮಂಗಳೂರು : ಸರಕಾರಿ ವಾಹನ ಚಾಲಕರ ಸಂಘದ ಸಭೆ
ಮಂಗಳೂರು,ಜ.2: ರಾಜ್ಯ ಸರಕಾರದ ವಾಹನ ಚಾಲಕರ ಸಂಘದ ದ.ಕ ಜಿಲ್ಲಾ ಘಟಕದ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆಯಿತು.
ಜೆ.ಸಿ. ಮಂಗಳೂರು ಅಧ್ಯಕ್ಷ ಡಾ. ರಾಘವೇಂದ್ರ ಹೊಳ್ಳ ಸಭೆ ಉದ್ಘಾಟಿಸಿದರು. ಅಬಕಾರಿ ನಿರೀಕ್ಷಕ ಸತೀಶ್ ಕುಮಾರ್ ಕುದ್ರೋಳಿ ಸಂಘದ 2018ರ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್ ನಾಯಕ್, ’ಡಿ’ ಗ್ರೂಪ್ ನೌಕರರ ಸಂಘದ ಅಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹ ಉಪಸ್ಥಿತರಿದ್ದರು.
ನಿವೃತ್ತ ವಾಹನ ಚಾಲಕರಾದ ಸುಂದರ್ ಸುವರ್ಣ ಹಾಗೂ ಜಾನ್ ಫೆರ್ನಾಂಡಿಸ್‌ರನ್ನು ಸನ್ಮಾನಿಸಲಾಯಿತು. ರಾಜ್ಯ ಸರಕಾರಿ ಗ್ರೂಪ್ ‘ಡಿ’ ನೌಕರರ ರಾಜ್ಯ ಮಟ್ಟದ ಸಮ್ಮೇಳನ ಯಶಸ್ವಿಯಾಗಿ ಜರಗಿಸಿದ ಅಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹ ಮತ್ತು ಪ್ರಧಾನ ಕಾರ್ಯದರ್ಶಿ ಸಿರಿಲ್ ರಾಬರ್ಟ್ ಡಿಸೋಜ ಇವರನ್ನು ಗೌರವಿಸಲಾಯಿತು.
ಸಭಾಧ್ಯಕ್ಷತೆಯನ್ನು ದೇವದಾಸ್ ಎಂ. ವಹಿಸಿದ್ದರು. ಕಾರ್ಯದರ್ಶಿ ನವೀನ್ ಕುಮಾರ್ ಕುಂಪಲ ವರದಿ ವಾಚಿಸಿದರು. ಜೊತೆ ಕಾರ್ಯದರ್ಶಿ ಯೋಗೀಶ್ ಮೊಯ್ಲಿ ವಂದಿಸಿದರು.