ಜ.5: ತುಳು ನಾಟಕ ಪರ್ಬದ ಕುರಿತು ಸಭೆ
Update: 2018-01-02 23:13 IST
ಮಂಗಳೂರು, ಜ.2: ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ವತಿಯಿಂದ ಮಾರ್ಚ್ ಕೊನೆಯಲ್ಲಿ ನಗರದ ಪುರಭವನದಲ್ಲಿ 8 ದಿನಗಳ ತುಳುನಾಟಕ ಪರ್ಬ (ತುಳು ನಾಟಕೋತ್ಸವ) ಆಚರಿಸಲು ಉದ್ದೇಶಿಸಲಾಗಿದೆ.
ನಾಟಕೋತ್ಸವದಲ್ಲಿ ಹಿಂದಿನ ತಲೆಮಾರಿನ ಹಿರಿಯರ ನಾಟಕ ಕೃತಿಗಳನ್ನು ರಂಗದಲ್ಲಿ ಪ್ರದರ್ಶಿಸಲು ಉದ್ದೇಶಿಸಲಾಗಿದ್ದು, ಪ್ರತಿ ದಿನ ಹಿರಿಯ ನಾಟಕಕಾರರ ಸಂಸ್ಮರಣೆ ನಡೆಸಲು ಯೋಜನೆ ಹಾಕಿಕೊಳ್ಳಲಾಗಿದೆ. ಈ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ರಂಗ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರ ಸಮಾಲೋಚನಾ ಸಭೆಯನ್ನು ಜ.5ರಂದು ಸಂಜೆ 3 ಗಂಟೆಗೆ ಉರ್ವಸ್ಟೋರ್‌ನಲ್ಲಿ ಅಕಾಡಮಿ ಕಚೇರಿ ತುಳುಭವನದ ಸಿರಿಚಾವಡಿಯಲ್ಲಿ ಏರ್ಪಡಿಸಲಾಗಿದೆ.
ಈ ಸಭೆಯಲ್ಲಿ ಜಿಲ್ಲೆಯ ತುಳು ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಕಲಾವಿದರು, ತಂತ್ರಜ್ಞರು, ನಿರ್ದೇಶಕರು ಭಾಗವಹಿಸಿ ಸಲಹೆ ಸೂಚನೆ ನೀಡಬಹುದು ಎಂದು ಪ್ರಕಟನೆ ತಿಳಿಸಿದೆ.
...