ಮೆಲ್ಕಾರ್ ಮಹಿಳಾ ಕಾಲೇಜಿನ ವಾರ್ಷಿಕೋತ್ಸವ

Update: 2018-01-03 04:43 GMT

ಬಿ.ಸಿ.ರೋಡ್, ಜ.3: ಮೆಲ್ಕಾರ್ ಮಹಿಳಾ ಪದವಿ ಮತ್ತು ಪದವಿ ಪೂರ್ವ ಕಾಲೇಜಿನ 9ನೇ ವಾರ್ಷಿಕೋತ್ಸವವು ಮಂಗಳವಾರ ಕಾಲೇಜಿನ ಮೈದಾನದಲ್ಲಿ ಜರಗಿತು.

ಸಮಾರಂಭವನ್ನು  ಉದ್ಘಾಟಿಸಿ ಮಾತನಾಡಿದ ಚಾರ್ಟಡ್ ಅಕೌಂಟೆಂಟ್ ಅಬ್ದುಲ್ ಸಮದ್, ನಾನು 10 ವರ್ಷಗಳ ಹಿಂದೆ ಈ ಕಾಲೇಜಿನ ಶಂಕುಸ್ಥಾಪನೆಗೆ ಬಂದಿದ್ದ ವೇಳೆ ಈ ಪ್ರದೇಶ ಬರೀ ಗುಡ್ಡ ಪ್ರದೇಶವಾಗಿತ್ತು. ಇದೀಗ ಕಾಲೇಜಿನ ಸ್ಥಾಪಕಾಧ್ಯಕ್ಷರಾದ ಎಸ್.ಎಂ.ರಶೀದ್ ಹಾಜಿ ಇಲ್ಲಿನ ಚಿತ್ರಣವನ್ನೇ ಬದಲಿಸಿ ಇಲ್ಲೊಂದು ಉತ್ತಮ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದಾರೆ. ಈ ಕಾಲೇಜಿನಲ್ಲಿ ಪ್ರಸ್ತುತ 600ಕ್ಕೂ ಅಧಿಕ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ ಹಾಗೂ ಪ್ರತೀ ವರ್ಷ ಉತ್ತಮ ಫಲಿತಾಂಶ ದಾಖಲಾಗುತ್ತಿದೆ ಎಂದು ತಿಳಿದು ಸಂತಸವಾಯಿತು. 

ಸಂಸ್ಥೆಯ ಸ್ಥಾಪಕಾಧ್ಯಕ್ಷ ಎಸ್.ಎಂ.ರಶೀದ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಅಧ್ಯಕ್ಷ ಪ್ರೊ.ಉದಯ ಬಾರಕೂರು, ದ.ಕ.-ಉಡುಪಿ ಜಿಲ್ಲಾ ಮುಸ್ಲಿಂ ಎಜುಕೇಶನ್ ಇಸ್ಟಿಟ್ಯೂಶನ್ಸ್ ಫೆಡರೇಶನ್ ಅಧ್ಯಕ್ಷ ಮುಹಮ್ಮದ್ ಬ್ಯಾರಿ, ಗ್ರೂಪ್ 4ನ ಅಬೂಬಕರ್ ಸಿದ್ದೀಕ್, ಮುಸ್ತಫಾ ಅಡ್ಯಾರ್, ಹಮೀದ್ ಮಾಸ್ಟರ್ ಹಾಗೂ ಪ್ರಾಂಶುಪಾಲ ಲತೀಫ್ ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ಸುವಾದ ಸ್ವಾಗತಿಸಿದರು. ಅವ್ವ ಆಬಿದ ಕಾರ್ಯಕ್ರಮ ನಿರೂಪಿಸಿದರು.ಆಯಿಶಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News