''ನನ್ನಲ್ಲಿರುವ ಅಣ್ವಸ್ತ್ರ ಗುಂಡಿ ದೊಡ್ಡದು ಹಾಗೂ ಬಹಳ ಶಕ್ತಿಯುತ''

Update: 2018-01-03 08:19 GMT

ವಾಷಿಂಗ್ಟನ್, ಜ.3: ತಮ್ಮ ಬಳಿ ಉತ್ತರ ಕೊರಿಯಾದಲ್ಲಿರುವುದಕ್ಕಿಂತಲೂ ತುಂಬ ದೊಡ್ಡದಾದ ಹಾಗೂ ಶಕ್ತಿಯತವಾದ ಅಣ್ವಸ್ತ್ರ ಗುಂಡಿ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್-ಉನ್ ಅವರನ್ನು ಎಚ್ಚರಿಸಿದ್ದಾರೆ.

‘‘ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ತಮ್ಮ ಮೇಜಿನಲ್ಲಿ ಅಣ್ವಸ್ತ್ರ ಗುಂಡಿ ಎಲ್ಲಾ ಸಮಯದಲ್ಲಿರುತ್ತದೆ ಎಂದು ಹೇಳಿದ್ದಾರೆ. ನನ್ನಲ್ಲೂ ಅಣ್ವಸ್ತ್ರ ಗುಂಡಿಯಿದೆ ಹಾಗೂ ಅದು ಅವರಲ್ಲಿರುವ ಗುಂಡಿಗಿಂತ ಬಹಳ ದೊಡ್ಡದಾಗಿದೆ ಮತ್ತು ಶಕ್ತಿಯತವಾಗಿದೆ ಹಾಗೂ ಅದು ಕಾರ್ಯನಿರ್ವಹಿಸುತ್ತಿದೆ ಎಂದು ಅವರ ಆಹಾರ ವಂಚಿತ ಆಡಳಿತದ ಯಾರಾದರೂ ಅವರಿಗೆ ಈ ಬಗ್ಗೆ ತಿಳಿಸುತ್ತೀರಾ ?’’ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

ಉತ್ತರ ಕೊರಿಯಾದ ಸರ್ವಾಧಿಕಾರಿ ತಮ್ಮ ಹೊಸ ವರ್ಷದ ಸಂದೇಶದಲ್ಲಿ ತಮ್ಮ ಮೇಜಿನಲ್ಲಿ ಅಣ್ವಸ್ತ್ರ ಗುಂಡಿಯಿದೆಯೆಂದು ಹೇಳಿ ಅಮೆರಿಕಕ್ಕೆ ಎಚ್ಚರಿಕೆ ನೀಡಲು ಪ್ರಯತ್ನಿಸಿದ ಬೆನ್ನಲ್ಲೇ ಟ್ರಂಪ್ ಅವರ ಹೇಳಿಕೆ ಬಂದಿದೆ. ಅದರೆ ತಮ್ಮ ಭಾಷಣದಲ್ಲಿ ಜಾಂಗ್ ಅವರು ದಕ್ಷಿಣ ಕೊರಿಯಾ ಜತೆಗೆ ಮಾತುಕತೆಗೆ ಸಿದ್ಧ ಎಂಬುದನ್ನೂ ಸೂಚ್ಯವಾಗಿ ತಿಳಿಸಿದ್ದರೂ ವಿಶ್ವ ಸಂಸ್ಥೆಯಲ್ಲಿನ ಅಮೆರಿಕಾ ಪ್ರತಿನಿಧಿ ನಿಕ್ಕಿ ಹ್ಯಾಲಿ ಎರಡೂ ಕೊರಿಯಾಗಳ ನಡೆಯಬಹುದಾದ ಯಾವುದೇ ಮಾತುಕತೆ ಕೇವಲ ‘ಬ್ಯಾಂಡ್-ಏಯ್ಡಾ’ ಆಗಲಿದೆ ಎಂದು ಹೇಳಿದರಲ್ಲದೆ ವಾಷಿಂಗ್ಟನ್ ಯಾವತ್ತೂ ಉತ್ತರ ಕೊರಿಯಾವನ್ನು ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ.

‘‘ಉತ್ತರ ಕೊರಿಯಾದಲ್ಲಿರುವ ಅಲ್ಲಾ ಅಣ್ವಸ್ತ್ರಗಳನ್ನು ನಿಷೇಧಿಸಲು ಅವರು ಕ್ರಮ ಕೈಗೊಳ್ಳದ ಹೊರತು ನಾವು ಯಾವುದೇ ಮಾತುಕತೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ,’’ ಎಂದೂ ಆಕೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News