ಕಾಟಿಪಳ್ಳದಲ್ಲಿ ಅಘೋಷಿತ ಬಂದ್: ಬಸ್ಸುಗಳಿಗೆ ಕಲ್ಲು ತೂರಾಟ
Update: 2018-01-03 18:37 IST
ಮಂಗಳೂರು, ಜ. 3: ದೀಪಕ್ ರಾವ್ ಕೊಲೆ ಘಟನೆಗೆ ಸಂಬಂಧಿಸಿ ಸುರತ್ಕಲ್ ಪೇಟೆಯಲ್ಲಿ ಅಂಗಡಿಗಳು ಬಂದ್ ಮಾಡಲಾಗಿದೆ. ಕಿಡಿಗೇಡಿಗಳು ಎರಡು ಬಸ್ಸುಗಳಿಗೆ ಕಲ್ಲೆಸೆದಿದ್ದಾರೆ.
ಕೊಲೆಯ ಬಳಿಕ ಕಾಟಿಪಳ್ಳ, ಕೃಷ್ಣಾಪುರ, ಚೊಕ್ಕಬೆಟ್ಟು, ಸುರತ್ಕಲ್ ಪೇಟೆಯಲ್ಲಿ ಜನ ಸಂಚಾರ ವಿರಳವಾಗಿದ್ದು, ಅಷೋಷಿತ ಬಂದ್ ಸೃಷ್ಟಿಯಾಗಿದೆ. ಸಂಜೆ ವೇಳೆಗೆ ಸುರತ್ಕಲ್ ಪೇಟೆಯಲ್ಲಿ ಕೆಲವರು ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಬಂದ್ ಮಾಡಿ ಮನೆಯತ್ತ ಮುಖ ಮಾಡಿದರೆ, ಕೆಲವೆಡೆ ಬಲವಂತವಾಗಿ ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ ಎಂದು ಹೇಳಲಾಗಿದೆ.
ಈ ನಡುವೆ ಕಾಟಿಪಳ್ಳ, ಕೃಷ್ಣಾಪುರ, ಚೊಕ್ಕಬೆಟ್ಟು ಹಾಗೂ ಸುರತ್ಕಲ್ ಪರಿಸರದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಕಾನ ಹಾಗೂ ಸೂರಿಂಜೆಯಲ್ಲಿ ಕಿಡಿಗೇಡಿಗಳು ಎರಡು ಬಸ್ಸುಗಳಿಗೆ ಕಲ್ಲು ಎಸೆದು ಹಾನಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.