×
Ad

ಕೋರೆಗಾಂವ್: ಭೀಮ ವಿಜಯೋತ್ಸವ ಮೇಲಿನ ದೌರ್ಜನಕ್ಕೆ ಖಂಡನೆ

Update: 2018-01-03 20:28 IST

ಉಡುಪಿ, ಜ.3: ಮಹಾರಾಷ್ಟ್ರದ ಕೋರೆಗಾಂವ್‌ನಲ್ಲಿ ಭೀಮ ವಿಜಯೋತ್ಸವದ 200ನೇ ವರ್ಷಾಚರಣೆಯನ್ನು ಸಂಭ್ರಮಿಸುತ್ತಿದ್ದವರ ಮೇಲೆ ಹಾಗೂ ಅಲ್ಲಿಗೆ ತೆರಳುತ್ತಿದ್ದವರ ಮೇಲೆ ಹಲ್ಲೆ ನಡೆಸಿರುವುದನ್ನು ಕರ್ನಾಟಕ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಂಘಟನೆಗಳ ಒಕ್ಕೂಟ (ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ) ಕರ್ನಾಟಕ ದಲಿತ ಸಂಘರ್ಷ ಸಮಿತಿಗಳ ಮಹಾ ಒಕ್ಕೂಟ ಹಾಗೂ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಉಡುಪಿ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.

 ಈ ಘಟನೆಯ ನಂತರ ಇಡೀ ಮಹಾರಾಷ್ಟ್ರ ರಾಜ್ಯವೇ ಪ್ರಕ್ಷುಬ್ಧವಾಗಲು ಕಾರಣೋತ್ತರಾದ ವ್ಯಕ್ತಿಗಳು ಹಾಗೂ ಅದರ ಹಿಂದಿರುವ ಶಕ್ತಿಗಳ ವಿರುದ್ಧ ಕೇಂದ್ರ ಸರಕಾರ ಗಮನ ಹರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ದೇಶದ ದಲಿತ ಮತ್ತು ದಮನಿತ ಶಕ್ತಿಗಳು ಒಂದಾಗಿ ಅದರ ವಿರುದ್ಧ ಸಂಘಟಿತ ಕಾರ್ಯಕ್ರಮ ರೂಪಿಸಬೇಕಾಗುತ್ತದೆ ಎಂದು ಸಂಘಟನೆಗಳು ಸಂಯುಕ್ತವಾಗಿ ಬಿಡುಗಡೆಗೊಳಿಸಿದ ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದೆ.

ಈ ಘಟನೆಯ ನಂತರ ಇಡೀ ಮಹಾರಾಷ್ಟ್ರ ರಾಜ್ಯವೇ ಪ್ರಕ್ಷುಬ್ಧವಾಗಲು ಕಾರಣೀೂತರಾದ ವ್ಯಕ್ತಿಗಳು ಹಾಗೂ ಅದರ ಹಿಂದಿರುವ ಶಕ್ತಿಗಳ ವಿರುದ್ಧ ಕೇಂದ್ರ ಸರಕಾರ ಗಮನ ಹರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ದೇಶದ ದಲಿತ ಮತ್ತು ದಮನಿತ ಶಕ್ತಿಗಳು ಒಂದಾಗಿ ಅದರ ವಿರುದ್ಧ ಸಂಘಟಿತ ಕಾರ್ಯಕ್ರಮ ರೂಪಿಸಬೇಕಾಗುತ್ತದೆ ಎಂದು ಸಂಘಟನೆಗಳು ಸಂಯುಕ್ತವಾಗಿ ಬಿಡುಗಡೆಗೊಳಿಸಿದ ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದೆ.

ಕೇಂದ್ರದಲ್ಲಿ ಹೊಸ ಸರಕಾರ ಬಂದ ನಾಲ್ಕು ವರ್ಷಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳು ತಮ್ಮ ಸಮಾಜದ ಸಂಭ್ರಮಾಚರಣೆ ಮಾಡುವುದನ್ನೂ ಸಹಿಸದ ಮನುವಾದಿ ಮನಸ್ಸುಗಳು ಮತ್ತು ಸಂಘಟನೆಗಳು ಇದರ ಹಿಂದಿರುವುದನ್ನು ಗಮನಿಸಲಾಗಿದೆ. ಇದಕ್ಕೆ ಸರಕಾರದ ಬೆಂಬಲವೂ ಇದ್ದಂತಿದೆ. ಈ ಬಗ್ಗೆ ಕೇಂದ್ರ ಸರಕಾರ ಎಚ್ಚೆತ್ತುಕೊಳ್ಳಬೇಕು, ಇಲ್ಲವಾದಲ್ಲಿ ದಲಿತ ಮತ್ತು ಅಲ್ಪಸಂಖ್ಯಾತ ಸಂಘಟನೆಗಳು ಸಂವಿಧಾನಾತ್ಮಕವಾಗಿ ಉಗ್ರ ಪ್ರತಿಭಟನೆ ನಡೆಸಿ, ತಮಗೆ ಸಂವಿಧಾನ ನೀಡಿದ ಹಕ್ಕುಗಳನ್ನು ರಕ್ಷಿಸಲು ಹೋರಾಟ ಸಂಘಟಿಸುವ ಬಗ್ಗೆಯೂ ಯೋಚಿಸಬೇಕಾಗುತ್ತದೆ ಎಂದು ಸಮಿತಿ ಮತ್ತು ಒಕ್ಕೂಟ ತಿಳಿಸಿದೆ.

ಸಮಾಜದಲ್ಲಿ ನ್ಯಾಯಕ್ಕಾಗಿ ಆಗ್ರಹಿಸುವುದೂ ತಪ್ಪು ಎನ್ನುವುದಕ್ಕೆ ಇತ್ತೀಚೆಗೆ ಉತ್ತರ ಕರ್ನಾಟಕದಲ್ಲಿ ಮಹದಾಯಿ ನೀರಿಗಾಗಿ ಹೋರಾಟ ನಡೆಸುತ್ತಿದ್ದವರ ಮೇಲೆ ಇಂತಹ ಸಂಘಟನೆ ಮತ್ತು ಪಕ್ಷಕ್ಕೆ ಸೇರಿದ್ದ ವ್ಯಕ್ತಿಗಳು ನಡೆಸಿರುವ ಹಲ್ಲೆಯೇ ಸಾಕ್ಷಿಯಾಗಿದೆ. ಶಾಂತಿಯುತ ಹೋರಾಟದಲ್ಲಿ ನಿರತರಾಗಿದ್ದ ರೈತ ಸಂಘದ ಪ್ರತಿನಿಧಿಗಳ ಮೇಲೆ ಮುಗಿಬಿದ್ದು ಹಲ್ಲೆ ನಡೆಸಿದ ಪ್ರಕರಣದಿಂದ ಇದು ಬಯಲಿಗೆ ಬಂದಿದೆ. ಒಕ್ಕೂಟವು ಇದನ್ನೂ ಖಂಡಿಸುತ್ತಿದ್ದು, ಹಲ್ಲೆಕೋರರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದೆ.

ಇಂತಹ ಮನಸ್ಥಿತಿಯೇ ಕೋರೆಗಾಂವ್ ಪ್ರಕರಣದ ಸಂಭ್ರಮಕ್ಕೂ ಅಡ್ಡಿಯಾಗಿದೆ. ದಲಿತರನ್ನು ಅವಮಾನಿಸುವ ದಮನಿತರನ್ನು ಅನುಮಾನಿಸುವ ಇಂತಹ ಪ್ರವೃತ್ತಿಯ ಸಂಘಟನೆಗಳು ಅದನ್ನು ಬದಲಿಸಿಕೊಳ್ಳಬೇಕು ಎಂದು ಹೇಳಿಕೆಯಲ್ಲಿ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News