ಪಾಣೆಮಂಗಳೂರು: ಜ. 7ರಂದು ಪಟ್ಟಿಕ್ಕಾಡ್ ಜಾಮಿಯಾ ನೂರಿಯ್ಯಾದ ಮಹಾಸಮ್ಮೇಳನದ ಪ್ರಚಾರ ಸಮ್ಮೇಳನ
ಬಂಟ್ವಾಳ, ಜ. 3: ಸಂಶುಲ್ ಉಲಮಾ ಇಸ್ಲಾಮಿಕ್ ಸೆಂಟರ್, ದಕ್ಷಿಣ ಕನ್ನಡ ಸ್ಟೂಡೆಂಟ್ ಫೋರಂ (ಡಿಕೆಎಸ್‌ಎಫ್) ಹಾಗೂ ಎಸ್ಕೆಎಸ್ಸೆಸ್ಸೆಫ್ ಆಲಡ್ಕ ಶಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಪಟ್ಟಿಕ್ಕಾಡ್ ಜಾಮಿಯಾ ನೂರಿಯ್ಯಾದ 55ನೆ ವಾರ್ಷಿಕ, 53ನೆ ಸನದುದಾನ ಮಹಾಸಮ್ಮೇಳನದ ಪ್ರಚಾರ ಸಮ್ಮೇಳನ ಹಾಗೂ ಶಂಸುಲ್ ಉಲಮಾ (ಖ.ಸಿ) ಮತ್ತು ಅಗಲಿದ ಸಮಸ್ತ ನೇತಾರರ ಅನುಸ್ಮರಣಾ ಸಮ್ಮೇಳನವು ಜ. 7ರಂದು ಪಾಣೆಮಂಗಳೂರು ಆಲಡ್ಕ ಮೈದಾನ ಶಂಸುಲ್ ಉಲಮಾ ನಗರದ ಮರ್‌ಹೂಂ ಸಜಿಪ ಉಸ್ತಾದ್ ವೇದಿಕೆಯಲ್ಲಿ ನಡೆಯಲಿದೆ.
ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಶೈಖುನಾ ಶೈಖುಲ್ ಜಾಮಿಅ ಪ್ರೊ. ಆಲಿಕುಟ್ಟಿ ಮುಸ್ಲಿಯಾರ್ ಸಮ್ಮೇಳನದ ನೇತೃತ್ವ ವಹಿಸಲಿದ್ದು, ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಉಪಾಧ್ಯಕ್ಷ ಶೈಖುನಾ ಹಾಜಿ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲು ದುವಾ ಶಿರ್ವಚನಗೈಯುವರು.
ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸುವರು. ಸೈಯದ್ ಸ್ವಾದಿಖಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ಉದ್ಘಾಟಿಸುವರು. ಜಾಮಿಯಾ ನೂರಿಯ್ಯಾ ಅರಬಿಯಾ ಕಾಲೇಜಿನ ಪ್ರೊಫೆಸರ್ ಸುಲೈಮಾನ್ ಫೈಝಿ ಚುಂಗತ್ತರ ಜಾಮಿಅ ಸಂದೇಶ ಭಾಷಣಗೈಯುವರು. ಸಮಸ್ತ ಕೇರಳ ಶಿಕ್ಷಣ ಮಂಡಳಿ ಕೇಂದ್ರ ಸಮಿತಿ ಕಾರ್ಯದರ್ಶಿ ಶೈಖುನಾ ಎಂ.ಟಿ. ಅಬ್ದುಲ್ಲಾ ಮುಸ್ಲಿಯಾರ್ ಅನುಸ್ಮರಣಾ ಭಾಷಣಗೈಯುವರು. ಶಮೀರ್ ದಾರಿಮಿ ಕೊಲ್ಲಂ ಮುಖ್ಯ ಭಾಷಣಗೈಯುವರು.
ಸೈಯದ್ ಜುನೈದ್ ಜಿಫ್ರಿ ತಂಙಳ್ ಆತೂರು, ಬೆಳ್ತಂಗಡಿ ಡಿಐಸಿ ಅಧ್ಯಕ್ಷ ಸೈಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್, ಸೈಯದ್ ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ, ಸೈಯದ್ ಅನಸ್ ತಂಙಳ್ ಗಂಡಿಬಾಗಿಲು, ಸೈಯದ್ ಅಲೀ ಹಾದಿ ತಂಙಳ್ ಕರಾವಳಿ, ಸೈಯದ್ ತ್ವಾಹಾ ಜಿಫ್ರೀ ತಂಙಳ್ ಬೆಳ್ತಂಗಡಿ, ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ, ಫೈಝೀಸ್ ಜಿಲ್ಲಾಧ್ಯಕ್ಷ ಉಮರ್ ಫೈಝಿ ಸಾಲ್ಮರ, ಸ್ವದಖತುಲ್ಲಾ ಫೈಝಿ, ಜಿಲ್ಲಾ ವಕ್ಫ್ ಬೋರ್ಡ್ ಮಾಜಿ ಚೆಯರ್‌ಮೆನ್ ಎಚ್.ಎಸ್. ಉಸ್ಮಾನ್ ಹಾಜಿ ಪಾಣೆಮಂಗಳೂರು, ಉದ್ಯಮಿಗಳಾದ ಝಕರಿಯಾ ಹಾಜಿ ಜೋಕಟ್ಟೆ, ಹನೀಫ್ ಹಾಜಿ ಗೋಳ್ತಮಜಲು, ಎ.ಆರ್. ಮುಹಮ್ಮದ್ ಅಲಿ ಬಂಟ್ವಾಳ, ಯೂಸುಫ್ ಹಾಜಿ ಗೋಳ್ತಮಜಲು, ಸುಲೈಮಾನ್ ಹಾಜಿ ನಾರ್ಶ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಡಿಕೆಎಸ್‌ಎಫ್ ಅಧ್ಯಕ್ಷ ಝೈದ್ ಗಡಿಯಾರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.