ಭಟ್ಕಳ: ನ್ಯೂ ಇಂಗ್ಲಿಷ್ ಪಿಯು ಕಾಲೇಜಿನಲ್ಲಿ 'ಸಾಧನ-2017' ವಾರ್ಷಿಕ ಸಮಾರಂಭ
ಭಟ್ಕಳ, ಜ. 3: ಸಾಧಿಸುವ ಗುರಿ, ಛಲ ಮತ್ತು ಸಂಕಲ್ಪವಿದ್ದರೆ ಏನನ್ನು ಸಾಧಿಸಬಹುದು ಎಂದು ಕುಂದಾಪುರದ ವೆಂಕಟರಮಣ ಪಿ.ಯು.ಕಾಲೇಜಿನ ಪ್ರಾಂಶುಪಾಲ ನಾಗೇಶ ಶಾನಭಾಗ ಹೇಳಿದರು.
ಅವರು ಭಟ್ಕಳದ ದಿ. ನ್ಯೂ ಇಂಗ್ಲೀಷ ಪಿ.ಯು. ಕಾಲೇಜಿನಲ್ಲಿ ಆಯೋಜಿಸಿದ್ದ 'ಸಾಧನಾ-2017' ಎನ್ನುವ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಾ, ವಿದ್ಯಾರ್ಥಿ ಜೀವನದಲ್ಲಿ ಪಿ.ಯು.ಸಿ. ದ್ವಿತೀಯ ವರ್ಷವು ಒಂದು ಮೆಟ್ಟಿಲಿದ್ದಂತೆ. ಇದರಲ್ಲಿ ಸರಿಯಾದ ಸಾಧನೆ ಮಾಡಿದಲ್ಲಿ ಮುಂದೆ ಉನ್ನತ ವ್ಯಾಸಂಗಕ್ಕೆ ಮತ್ತು ಉದ್ಯೋಗಾವಕಾಶಕ್ಕೆ ಅನುಕೂಲವಾಗುತ್ತದೆಂದು ಹೇಳಿದರು.
ಭಟ್ಕಳ ಏಜ್ಯುಕೇಶನ ಟ್ರಸ್ಟನ ಅಧ್ಯಕ್ಷ ಡಾ.ಸುರೇಶ ನಾಯಕ, ಅಧ್ಕಕ್ಷತೆ ವಹಿಸಿದ್ದರು. ಪ್ರಾಂಶುಪಾಲ ವಿರೇಂದ್ರ ಶಾನಭಾಗ, ಟ್ರಸ್ಟಿ ಮ್ಯಾನೇಜರ ರಾಜೇಶ ನಾಯಕ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ರಸಿಂಹ ಮೂರ್ತಿ ಉಪಸ್ಥಿತರಿದ್ದರು.
ಪಠ್ಯ, ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿಭಾಗವಾರು ಉತ್ತಮ ವಿದ್ಯಾರ್ಥಿಗಳಾಗಿ, ಕಲಾ ವಿಭಾಗದಿಂದ ವೆಂಕಟೇಶ ಆರ್, ವಾಣಿಜ್ಯ(ಸಂಖ್ಯಾಶಾಸತ್ರ) ವಿಭಾಗದಿಂದ ಪ್ರಿಯಾಂಕಾ ಶಿರೂರು, ವಾಣಿಜ್ಯ(ಗಣಕ ಶಾಸತ್ರ) ವಿಭಾಗದಿಂದ ಅರ್ಚನಾ ಹೆಬ್ಬಾರ ಮತ್ತು ವಿಜ್ಞಾನ ವಿಭಾಗದಿಂದ ಮಮತಾ ನಾಯ್ಕ ಇವರಿಗೆ ಪ್ರಶಸ್ತಿ ಫಲಕಗಳನ್ನು ನೀಡಲಾಯಿತು.
ವಾಣಿಜ್ಯ(ಗಣಕಶಾಸ್ತ) ವಿಭಾಗದ ಮೇಘನಾ ಭಂಡಾರಿ ಅತ್ಯುತ್ತಮ ವಿದ್ಯಾರ್ಥಿನಿ ಪ್ರಶಸ್ತಿಯನ್ನು ಪಡೆದುಕೊಂಡರೆ ದ್ವಿತೀಯ ಪಿ.ಯು.ಸಿ ಕಲಾ ವಿಭಾಗವು ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಪಡೆದುಕೊಂಡಿತು. ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಪ್ರಿತೇಶ ನಾಯ್ಕ (ಚಿತ್ರಕಲೆ), ಗುರುರಾಜ ಮೋಗೇರ(ಕಬ್ಬಡ್ಡಿ) ಶಶಾಂಕ ನಾಯ್ಕ (ಕಬ್ಬಡ್ಡಿ) ಸುದೀಪ ನಾಯ್ಕ (ಹರ್ಡಲ್ಸ) ಆಭಿಷೇಕ ನಾಯ್ಕ (400 ಮೀ.ಓಟ)ಮತ್ತು ರಾಷ್ಟ್ರ ಮಟ್ಟದಲ್ಲಿ ಕೀರ್ತಿ ತಂದ ಜಿ.ರತನ್ ಇವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
ಉಪನ್ಯಾಸಕಿ ಲೋಲಿಟಾ ರೋಡ್ರಿಗಿಸ್ ವಾರ್ಷಿಕ ವರದಿಯನ್ನು ಓದಿದರು. ವಿದ್ಯಾರ್ಥಿನಿಯರಾದ ಅರ್ಚನಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಉಪನ್ಯಾಸಕಿ ನಾಗಲಕ್ಷ್ಮೀ ಮತ್ತು ಗುರುರಾಜ ಬಾಳಗಿ ನಿರೂಪಿಸಿದರು, ನಸ್ರೀನ್ ಬೇಗಂ ಬಿ. ಸ್ವಾಗತಿಸಿದರು, ರಾಮಚಂದ್ರ ಭಟ್ ವಂದಿಸಿದರು. ಕೊನೆಯಲ್ಲಿ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮಗಳು ನಡೆದವು.