ಜ.4: ಸುರತ್ಕಲ್, ಕೃಷ್ಣಾಪುರದಲ್ಲಿ ಬಂದ್ ಗೆ ಕರೆ
Update: 2018-01-03 22:28 IST
ಮಂಗಳೂರು, ಜ. 3: ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಘಟನೆಯ ಹಿನ್ನೆಲೆಯಲ್ಲಿ ಸುರತ್ಕಲ್ ಮತ್ತು ಕೃಷ್ಣಾಪುರ ಪ್ರದೇಶಗಳಲ್ಲಿ ಜ.4ರಂದು ಬಂದ್ ನಡೆಸುವಂತೆ ಸಂಘಪರಿವಾರದ ಸಂಘಟನೆಗಳು ಕರೆ ನೀಡಿವೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಜರಂಗದಳ ಜಿಲ್ಲಾ ಸಂಚಾಲಕ ಭುಜಂಗ ಕುಲಾಲ್, ಕೊಲೆಗೀಡಾದ ದೀಪಕ್ ರಾವ್ ಶವಯಾತ್ರೆ ಜ.4ರಂದು ಮಂಗಳೂರಿನಿಂದ ಸುರತ್ಕಲ್‌ಗೆ ನಡೆಯಲಿದೆ. ಬೆಳಗ್ಗೆ 9.30ಕ್ಕೆ ನಗರದ ಖಾಸಗಿ ಆಸ್ಪತ್ರೆಯಿಂದ ಹೊರಟು ಕುಂಟಿಕಾನ, ಸುರತ್ಕಲ್ ಮೂಲಕ ಕಾಟಿಪಳ್ಳ ತಲುಪಲಿದೆ ಎಂದರು.