×
Ad

ಸುರತ್ಕಲ್ ನಲ್ಲಿ ಯುವಕನ ಮೇಲೆ ತಲವಾರು ದಾಳಿ

Update: 2018-01-03 22:39 IST

ಮಂಗಳೂರು, ಜ.3: ದ್ವಿಚಕ್ರ ವಾಹನದಲ್ಲಿ ಕಾಟಿಪಳ್ಳದಿಂದ ಮಂಗಳೂರಿಗೆ ಬರುತ್ತಿದ್ದ ಯುವಕನೊಬ್ಬನನ್ನು ಸುರತ್ಕಲ್ ನಲ್ಲಿ ತಡೆದ ದುಷ್ಕರ್ಮಿಗಳ ತಂಡ ತಲವಾರು ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ.

ದಾಳಿಯಿಂದ ಗಾಯಗೊಂಡಿರುವ ಯುವಕನನ್ನು ನಗರದ ಬಂದರ್ ನ ಅಬ್ದುರ್ರಝಾಕ್ ರ ಪುತ್ರ ಮುಹಮ್ಮದ್ ಮುಬಶ್ಶಿರ್ (22) ಎಂದು ಗುರುತಿಸಲಾಗಿದೆ.

ಅಬ್ದುರ್ರಝಾಕ್ ಅವರ ಅಣ್ಣನ ಮಗನ ಮದುವೆ ಇಂದು ಕಾಟಿಪಳ್ಳದಲ್ಲಿ ನೆರವೇರಿತ್ತು. ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಂಗಳೂರಿಗೆ ಮುಬಶ್ಶಿರ್ ಬರುತ್ತಿದ್ದಾಗ ದುಷ್ಕರ್ಮಿಗಳ ತಂಡವೊಂದು ಅವರನ್ನು ತಡೆದು ತಲವಾರು ದಾಳಿ ನಡೆಸಿದೆ. ದಾಳಿಯಿಂದ ಮುಬಶ್ಶಿರ್ ರ ತಲೆಗೆ ಏಟಾಗಿದ್ದು, ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News