ಜ. 31:150 ವರ್ಷಗಳಲ್ಲೇ ಮೊದಲ ಬಾರಿಗೆ ಆಗಸದಲ್ಲಿ ವಿಶೇಷ ವಿದ್ಯಮಾನ!
Update: 2018-01-03 22:51 IST
ವಾಶಿಂಗ್ಟನ್, ಜ. 3: ಅಪರೂಪದ ಸಂಪೂರ್ಣ ನೀಲಿ ಚಂದ್ರಗ್ರಹಣವು ಜನವರಿ 31ರಂದು ಸಂಭವಿಸಲಿದೆ. ಆ ದಿನ ನೀಲಿ ಚಂದ್ರನೂ ಕಾಣಿಸಿಕೊಳ್ಳಲಿದ್ದು, 150 ವರ್ಷಗಳಲ್ಲೇ ಮೊದಲ ಬಾರಿಗೆ ಈ ವಿದ್ಯಮಾನ ಸಂಭವಿಸಲಿದೆ.
ಒಂದು ಕ್ಯಾಲೆಂಡರ್ ತಿಂಗಳಲ್ಲಿ ಸಂಭವಿಸುವ ಎರಡನೆ ಹುಣ್ಣಿಮೆಯನ್ನು ‘ನೀಲಿ ಚಂದ್ರ’ ಎಂಬುದಾಗಿ ಸಾಮಾನ್ಯವಾಗಿ ಕರೆಯಲಾಗುತ್ತಿದೆ.
ಮಧ್ಯ ಮತ್ತು ಪೂರ್ವ ಏಶ್ಯ, ಇಂಡೋನೇಶ್ಯ, ನ್ಯೂಝಿಲ್ಯಾಂಡ್ ಮತ್ತು ಆಸ್ಟ್ರೇಲಿಯದ ಹೆಚ್ಚಿನ ಭಾಗಗಳಲ್ಲಿ ಚಂದ್ರಗ್ರಹಣ ಗೋಚರಿಸಲಿದೆ.