×
Ad

ಮನೆಮನೆಗೆ ಕುಮಾರಣ್ಣ: ಪುತ್ತೂರು ಜೆಡಿಎಸ್ ಆಮಂತ್ರಣ ವಿತರಣೆ

Update: 2018-01-03 23:10 IST

ಪುತ್ತೂರು, ಜ. 3: ಜೆಡಿಎಸ್ ವತಿಯಿಂದ ಜ. 9ರಂದು ಮಂಗಳೂರಿನಲ್ಲಿ ನಡೆಯುವ ಸೌಹಾರ್ದ ಸಮಾವೇಶದ ಪ್ರಚಾರಾರ್ಥವಾಗಿ ಬುಧವಾರ ಪುತ್ತೂರು ಪೇಟೆಯಲ್ಲಿ ಆಮಂತ್ರಣ ವಿತರಣೆ ನಡೆಯಿತು.

ದರ್ಬೆ ವ್ರತ್ತದ ಬಳಿ ಪಕ್ಷದ ಧ್ವಜ ಹಾರಿಸಿ ಆಮಂತ್ರಣ ವಿತರಣೆಗೆ ಚಾಲನೆ ನೀಡಿದ ಜೆಡಿಎಸ್ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಐ.ಸಿ ಕೈಲಾಸ್ ಮಾತನಾಡಿ ಎರಡು ರಾಷ್ಟ್ರೀಯ ಪಕ್ಷಗಳು ತನ್ನ  ರಾಜಕೀಯ ಲಾಭಕ್ಕೋಸ್ಕರ ಬುದ್ಧಿವಂತ ಜಿಲ್ಲೆಯಾದ ಕರಾವಳಿ ಜಿಲ್ಲೆಯಲ್ಲಿ ಸಾಮರಸ್ಯಕ್ಕೆ ಧಕ್ಕೆ ತರುತ್ತಿರುವುದರಿಂದ ಸಾರ್ವಜನಿಕರು ಅಭದ್ರತೆಯಲ್ಲಿ ಜೀವನ ಮಾಡುತ್ತಿದ್ದು, ಇಲ್ಲಿ ಸಾಮರಸ್ಯ ನೆಲೆಸುವುದಕ್ಕಾಗಿ ನಮ್ಮ ನಾಯಕರಾದ ಕುಮಾರಣ್ಣ ಅವರ ನೇತ್ರತ್ವದಲ್ಲಿ ಜ.9 ರಂದು ನಡೆಯಲಿರುವ ಸೌಹಾರ್ದ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಿದ ಅವರು ಕಡಲತಡಿಗೆ ಬರಲಿರುವ ಕುಮಾರಣ್ಣರವರು 1 ಲಕ್ಷ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ಶಾಂತಿ ನೆಲೆಸಲಿದ್ದಾರೆ ಎಂದು ಅವರು ಹೇಳಿದರು.

ಜೆಡಿಎಸ್ ಅಲ್ಪಸಂಖ್ಯಾತ ಅಧ್ಯಕ್ಷ ಕರೀಮ್ ಪಳ್ಳತ್ತೂರು, ವಿಟ್ಲದ ಜಾಫರ್, ಯುವ ಜೆಡಿಎಸ್ ನ ರಾಧಾಕ್ರಷ್ಣ ಸಾಲಿಯಾನ್, ಶಿವ ಸಾಲಿಯಾನ್, ಅದ್ದು ಪಡೀಲ್, ವಿಕ್ಟರ್ ಗೋನ್ಸಾಲಿಸ್, ಹರೀಶ್ ಕೊಟ್ಟಾರಿ, ಅಬ್ದುಲ್ ಖಾದರ್ ಪಳ್ಳತ್ತೂರು, ಆಶ್ಲೇಶ್ ಭಟ್, ಖಲಂದರ್ ಶರೀಫ್, ರಝಾಕ್ ಮಾಡಾವು, ಬಾಬು ರಾಜೇಂದ್ರ ಕೊಳ್ತಿಗೆ, ಕೆ.ಪಿ ಇಬ್ರಾಹಿಂ, ರವಿರಾಜ್ ಗುಂಡ್ಯ, ಮೋನು ಕಾರ್ಖಾನೆ ಉಪ್ಪಿನಂಗಡಿ, ಅಬ್ದುಲ್ ರಹ್ಮಾನ್ ಮೇದರಬೆಟ್ಟು, ಖಲಂದರ್ ಶಾಫಿ ನೆಕ್ಕಿಲಾಡಿ, ಹಮೀದ್ ಕಂಬಳಬೆಟ್ಟು, ರಮೇಶ್ ಹಾರಾಡಿ, ಅಬ್ದುಲ್ ಖಾದರ್ ಪಳ್ಳತ್ತೂರು ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.
ಜೆಡಿಎಸ್ ರಾಜ್ಯ ಕಾರ್ಯದರ್ಶಿ ಅಶ್ರಫ್ ಕಲ್ಲೇಗ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News