×
Ad

ಗುರುದೇವ ಸೇವಾ ಬಳಗ ವಾರ್ಷಿಕೋತ್ಸವ: 'ತುಳುನಾಡ ಬಲಿಯೇಂದ್ರೆ' ತಾಳಮದ್ದಳೆ

Update: 2018-01-03 23:56 IST

ಮಂಗಳೂರು, ಜ. 3: ಒಡಿಯೂರು  ಶ್ರೀ ಗುರುದೇವ ಸೇವಾ ಬಳಗ ಮಂಗಳೂರು ವಲಯ ಇದರ 12ನೆ ವಾರ್ಷಿಕ ಸಮಾರಂಭ ಮತ್ತು ಗುರು ಪಾದುಕಾರಾಧನೆಯ ಸಲುವಾಗಿ ಮಂಗಳೂರು ಪುರಭವನದಲ್ಲಿ 'ತುಳುನಾಡ ಬಲಿಯೇಂದ್ರೆ' ತಾಳಮದ್ದಳೆ ಇತ್ತೀಚೆಗೆ ಜರಗಿತು.

ಪ್ರಸಂಗಕರ್ತ ಹರೀಶ್ ಶೆಟ್ಟಿ ಸೂಡ ಅವರ ಭಾಗವತಿಕೆಗೆ ಸುದಾಸ್ ಕಾವೂರು, ರೋಹಿತ್ ಉಚ್ಚಿಲ ಮತ್ತು ಚೇತನ್ ಸಚ್ಚರಿಪೇಟೆ ಹಿಮ್ಮೇಳದಲ್ಲಿ ಸಹಕರಿಸಿದರು.

ಅರ್ಥಧಾರಿಗಳಾಗಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ (ಬಲಿ), ಕದ್ರಿ ನವನೀತ ಶೆಟ್ಟಿ(ಶುಕ್ರ) ಮತ್ತು ದಯಾನಂದ ಕತ್ತಲ್ ಸಾರ್(ವಾಮನ) ಭಾಗವಹಿಸಿದರು. 
ಈ ಸಂದರ್ಭ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರು ಸಮಾಜದ ವಿವಿಧ ಕ್ಷೇತ್ರದ ಸಾಧಕರಿಗೆ ಸೇವಾಬಳಗದ ಗೌರವ ಪ್ರಶಸ್ತಿ ನೀಡಿ ಸಮ್ಮಾನಿಸಿದರು. ಕಲೆ,ಸಾಹಿತ್ಯ ಮತ್ತು ಮಾಧ್ಯಮ ರಂಗದ ಸೇವೆಗಾಗಿ ಭಾಸ್ಕರ ರೈ ಕುಕ್ಕುವಳ್ಳಿ ಪ್ರಶಸ್ತಿ ಸ್ವೀಕರಿಸಿದರು.

ಮಂಗಳೂರು ವಲಯ ಗುರುದೇವ ಸೇವಾ ಬಳಗದ ಅಧ್ಯಕ್ಷ ಜಯಂತ ಜೆ.ಕೋಟ್ಯಾನ್ ಸ್ವಾಗತಿಸಿದರು. ಕಾರ್ಯದರ್ಶಿ ಬಿ.ಕೆ. ಚಂದ್ರಶೇಖರ್ ವಂದಿಸಿದರು. ನಿರ್ದೇಶಕ ತಾರಾನಾಥ ಕೊಟ್ಟಾರಿ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News