×
Ad

ಕರಗೇಟೆಡ್ ಪೇಪರ್‌ಬಾಕ್ಸ್ ಉದ್ಯಮ ‘ಆರ್ಮರ್ ಕಾರ್ಟನ್’ ಶುಭಾರಂಭ

Update: 2018-01-04 19:51 IST

ಉಡುಪಿ, ಜ.4: 80 ಬಡಗಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಆತ್ರಾಡಿ -ಹಿರೇಬೆಟ್ಟು ರಸ್ತೆಯಲ್ಲಿ ನೂತನವಾಗಿ ಪ್ರಾರಂಭಿಸಲಾದ ಅತ್ಯಾಧು ನಿಕ ತಂತ್ರಜ್ಞಾನದ ಯಂತ್ರೋಪಕರಣಗಳ ಕರಗೇಟೆಡ್ ಪೇಪರ್ ಬಾಕ್ಸ್ ಉದ್ಯಮ ‘ಆರ್ಮರ್ ಕಾರ್ಟನ್’ನ್ನು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಹಾಗೂ ಕ್ರೀಡೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಗುರುವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಸಚಿವರು, ಒಂದು ಕೈಗಾರಿಕೆ ಪ್ರಾರಂಭವಾದರೆ ಅದ ರಿಂದ ಮಾಲಕರಿಗೆ ಮಾತ್ರವಲ್ಲ ಸಾಕಷ್ಟು ಮಂದಿಗೆ ಪ್ರಯೋಜನವಾಗಿ ಕುಟುಂಬಗಳು ಉತ್ತಮ ದಾರಿಯಲ್ಲಿ ಸಾಗಲು ಅನುಕೂಲವಾಗುತ್ತದೆ. ಅಲ್ಲದೆ ತೆರಿಗೆಯ ಮೂಲಕ ಸರಕಾರಕ್ಕೂ ಲಾಭವಾಗಿ ಹಲವು ಜನಪರ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲು ಸಹಕಾರವಾಗುತ್ತದೆ. ರಾಜ್ಯದ ಒಟ್ಟು ತೆರಿಗೆಯಲ್ಲಿ ಶೇ. 80ರಷ್ಟು ತೆರಿಗೆ ಬೆಂಗಳೂರು ನಗರ ಜಿಲ್ಲೆಯಿಂದಲೇ ಸಂಗ್ರಹವಾಗುತ್ತದೆ. ಇದಕ್ಕೆ ಅಲ್ಲಿರುವ ಕೈಗಾರಿಕೆಗಳು, ಸಾಫ್ಟ್ೇರ್ ಕಂಪೆನಿಗಳು ಕಾರಣ ಎಂದರು.

ಮುಖ್ಯ ಅತಿಥಿಗಳಾಗಿ ಕಾಪು ಶಾಸಕ ವಿನಯ ಕುಮಾರ್ ಸೊರಕೆ, 80 ಬಡಗಬೆಟ್ಟು ಗ್ರಾಪಂ ಅಧ್ಯಕ್ಷ ಶಾಂತಾರಾಮ್ ಶೆಟ್ಟಿ, ಮಣಿಪಾಲ ಗ್ರೂಪ್‌ನ ಆಡಳಿತ ನಿರ್ದೇಶಕ ಟಿ.ಗೌತಮ್ ಪೈ ಶುಭ ಹಾರೈಸಿದರು. ಅಬ್ದುಲ್ಲಾ ಗ್ರೂಪ್ ಆಫ್ ಕಂಪೆನಿಯ ಕೆ.ಅಬ್ದುಲ್ಲ ಪರ್ಕಳ, ಜಮಾಅತೆ ಇಸ್ಲಾಮೀ ಹಿಂದ್‌ನ ಅಕ್ಬರ್ ಅಲಿ, ಆತ್ರಾಡಿ ಮಸೀದಿ ಅಧ್ಯಕ್ಷ ಹಾಜಿ ಕೆ.ಅಬೂಬಕ್ಕರ್ ಪರ್ಕಳ ಉಪಸ್ಥಿತರಿದ್ದರು.

ಮಣಿಪಾಲ ಮಸೀದಿಯ ಮೌಲಾನ ಸಾಧಿಕ್ ಮೌಲ್ವಿ ಕಿರಾತ್ ಪಠಿಸಿದರು. ಮಾಜಿ ಇಮಾಮ್ ಅಬ್ದುರ್ರಹ್ಮಾನ್ ದುವಾ ನೆರವೇರಿಸಿದರು. ಆರ್ಮನ್ ಕಾರ್ಟನ್‌ನ ಸಮೀರ್ ಮುಹಮ್ಮದ್ ಸ್ವಾಗತಿಸಿದರು. ಅವುಸುಫ್ ಅಹ್ಸಾನ್ ವಂದಿಸಿದರು. ಹುದಾ ಅಹ್ಸಾನ್ ಕಾರ್ಯಕ್ರಮ ನಿರೂಪಿಸಿದರು.

ಈ ನೂತನ ಕೈಗಾರಿಕೆಯು ವರ್ಷಕ್ಕೆ 2.70 ಲಕ್ಷ ಟನ್ ಕರಗೇಟೆಡ್ ಪೇಪರ್ ಬಾಕ್ಸ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಕರಗೇಟೆಡ್ ಪೇಪರ್ ಬಾಕ್ಸ್‌ನ್ನು ಕೈಗಾರಿಕೆಗಳ ಸಾಮಾಗ್ರಿಗಳು, ಆಹಾರ ಮತ್ತು ತೋಟಗಾರಿಕೆ ಉತ್ಪನ್ನ ಗಳನ್ನು ಪ್ಯಾಕಿಂಗ್ ಮಾಡಲು ಬಳಲಾಗುತ್ತದೆ. ಕಾಗದ ಮತ್ತು ಕಾಗದೋತ್ಪನ್ನ ಗಳನ್ನು ಪರಿವರ್ತಿಸಿ ಕೈಗಾರಿಕೆ ಕಚ್ಚಾ ಉತ್ಪನ್ನಗಳನ್ನು ಬಳಸಿ ಕರಗೇಟೆಡ್ ಪೇಪರ್ ಬಾಕ್ಸ್‌ನ್ನು ತಯಾರಿಸಲಾಗುತ್ತದೆ. ಇದನ್ನು ಆಹಾರ ಯೋಗ್ಯ ಎಣ್ಣೆ, ಸಂಸ್ಕರಿಸ ಲ್ಪಟ್ಟ ನೀರು, ಔಷಧಗಳು, ಬಿಸ್ಕತ್‌ಗಳು, ಹಾಲು ಮತ್ತು ಹಾಲಿನ ಉತ್ಪನ್ನಗಳು, ಸೋಪು, ಕಾಸ್ಮೆಟಿಕ್ಸ್, ಟೀ ಮತ್ತು ಕಾಫಿ, ಒಳಉಡುಪುಗಳು, ಪಾದರಕ್ಷೆಗಳ ಪ್ಯಾಂಕಿಂಗ್‌ಗಳಲ್ಲಿ ಬಳಸಲಾಗುತ್ತದೆ ಎಂದು ಸಮೀರ್ ಮುಹಮ್ಮದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News