ಉಡುಪಿ: ಉಚಿತ ಶೌಚಾಲಯದಲ್ಲಿ ಹುಂಡಿ !
Update: 2018-01-04 19:54 IST
ಉಡುಪಿ, ಜ.4: ಉಡುಪಿ ಶ್ರೀಕೃಷ್ಣ ಮಠ ರಾಜಾಂಗಣ ಸಮೀಪದ ಯಾತ್ರಿಕರ ವಾಹನ ನಿಲುಗಡೆ ಸ್ಥಳದಲ್ಲಿ ಉಚಿತ ಸೇವೆ ಒದಗಿಸುವ ಸಾರ್ವಜನಿಕ ಶೌಚಾಲಯದಲ್ಲಿ ಕೆಲದಿನಗಳ ಹಿಂದೆ ಸ್ವಚ್ಛತಾ ಹುಂಡಿಯೊಂದು ಪ್ರತ್ಯಕ್ಷವಾಗಿದೆ.
ಉಚಿತವಾಗಿರುವ ಈ ಶೌಚಾಲಯದಲ್ಲಿ ಸಾರ್ವಜನಿಕರು ಹಣ ನೀಡಬಾರದೆಂಬ ವಿನಂತಿಯ ಬರಹ ಸೂಚನಾ ಫಲಕ ಇದೆ. ಆದರೆ ಕೆಲವು ದಿನ ಗಳಿಂದ ಇಲ್ಲಿ ಸ್ವಚ್ಚತಾ ಹುಂಡಿಯನ್ನು ಅಳವಡಿಸಲಾಗಿದೆ. ಶೌಚಾಲಯದಲ್ಲಿ ಕಾಣ ಸಿಕ್ಕಿರುವ ಹುಂಡಿ ನೋಡಿ ಯಾತ್ರಾರ್ಥಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.