ಜ.6: ಕೊಂಕಣಿ ಭಾಷಾ ಜ್ಞಾನದ ಬಗ್ಗೆ ವಿಶೇಷ ಉಪನ್ಯಾಸ
Update: 2018-01-04 20:32 IST
ಮಂಗಳೂರು, ಜ.4: ಮಂಗಳೂರು ವಿಶ್ವ ವಿದ್ಯಾನಿಲಯದ ಘಟಕ-ವಿಶ್ವ ವಿದ್ಯಾನಿಲಯ ಸಂಧ್ಯಾ ಕಾಲೇಜಿನ ಸ್ನಾತಕೋತ್ತರ ಕೊಂಕಣಿ ವಿಭಾಗವು ಜ.6ರಂದು ಸಂಜೆ 6:30ಕ್ಕೆ ಕೊಂಕಣಿ ಭಾಷಾ ಜ್ಞಾನ ಮತ್ತು ಸಂಶೋಧನೆ ಎನ್ನುವ ವಿಷಯದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿದೆ.
ಸಂಪನ್ಮೂಲ ವ್ಯಕ್ತಿಗಳಾಗಿ ಸಂಶೋಧಕಿ ಡಾ. ವಾರಿಜಾ ನೀರ್ಬೈಲ್ ನೆರವೇರಿಸುವರು ಎಂದು ಸಂಯೋಜಕ ಡಾ. ಅರವಿಂದ ಶ್ಯಾನಭಾಗ ತಿಳಿಸಿದ್ದಾರೆ.