×
Ad

ಶಾಲಾ ಪ್ರವಾಸಿ ಟೆಂಪೊ ಮರಕ್ಕೆ ಢಿಕ್ಕಿ: ಹಲವರಿಗೆ ಗಾಯ

Update: 2018-01-04 22:03 IST

ಕಾರ್ಕಳ, ಜ.4: ಶಾಲಾ ಶೈಕ್ಷಣಿಕ ಪ್ರವಾಸದ ಟೆಂಪೊವೊಂದು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಗಾಯಗೊಂಡ ಘಟನೆ ಜ.3ರಂದು ಮಧ್ಯಾಹ್ನ ವೇಳೆ ಮಾಳ ಗ್ರಾಮದ ಮುಳ್ಳೂರು ಗೇಟ್ ಸಮೀಪ ನಡೆದಿದೆ.

ಶೃಂಗೇರಿ ಕಡೆಯಿಂದ ಬಜಗೋಳಿ ಕಡೆಗೆ ಬರುತ್ತಿದ್ದ ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ದೊಡ್ಡಬ್ಬೀಗೇರಿ ಸರಕಾರಿ ಶಾಲಾ ಮಕ್ಕಳ ಪ್ರವಾಸದ ಟೆಂಪೋ ಟ್ರಾವೆಲ್ಲರ್ ವಾಹನವು ಚಾಲಕನ ಅತೀವೇಗ ಮತ್ತು ಅಜಾಗರೂಕತೆ ಯಿಂದ ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದಿದ್ದು, ಇದರಿಂದ ವಾಹನ ಎದುರು ಸಂಪೂರ್ಣ ಜಖಂಗೊಂಡಿದೆ.

ಇದರ ಪರಿಣಾಮ ವಾಹನದಲ್ಲಿದ್ದ ಶಾಲಾ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News