ಹಂದಟ್ಟು ದೇವಸ್ಥಾನಕ್ಕೆ ನುಗ್ಗಿ ಸೊತ್ತು ಕಳವು
Update: 2018-01-04 22:04 IST
ಕೋಟ, ಜ.4: ಕೋಟ ಹಂದಟ್ಟು ಹಂದೆ ಶ್ರೀವಿಷ್ಣುಮೂರ್ತಿ ದೇವಸ್ಥಾನಕ್ಕೆ ಜ.3ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಸೊತ್ತು ಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ದೇವಸ್ಥಾನದ ಪಶ್ಚಿಮ ಭಾಗದ ಬಾಗಿಲು ತೆಗೆದು ಒಳಗಡೆ ನುಗ್ಗಿದ ಕಳ್ಳರು, ಒಳಗಿನ ಇನ್ನೊಂದು ಬಾಗಿಲು ಒಡೆದು ವಿಷ್ಣು ದೇವರ ಗುಡಿಯ ಬಾಗಿಲು ಮುರಿದು ದೇವರ ಬೆಳ್ಳಿಯ ಪ್ರಭಾವಳಿ, 2 ಬೆಳ್ಳಿಯ ಸರ, ಬೆಳ್ಳಿಯ ಕನ್ನಡಕ, 2 ಬೆಳ್ಳಿಯ ಬಳೆಗಳು ಮತ್ತು ಗಣಪತಿ ದೇವರ ಗುಡಿಯ ಒಳಗಡೆ ದೇವರ ಮೂರ್ತಿಗೆ ಅಳವಡಿಸಿದ ಬೆಳ್ಳಿಯ ಪ್ರಭಾವಳಿ ಮತ್ತು 2ಬೆಳ್ಳಿಯ ಸರಗಳನ್ನು ಕಳವು ಮಾಡಿದ್ದಾರೆ.
ಒಟ್ಟು 1.20 ಲಕ್ಷ ರೂ. ಮೌಲ್ಯದ 3ಕೆ.ಜಿ. ಬೆಳ್ಳಿಯ ಸಾಮಾಗ್ರಿಗಳನ್ನು ಕಳವು ಮಾಡಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದ್ದು, ತನಿಖೆ ನಡೆಯುತ್ತಿದೆ.