ಜ.5ರಿಂದ ಕೃಷ್ಣ ಮಠದಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ
Update: 2018-01-04 22:14 IST
ಉಡುಪಿ, ಜ.4: ಪರ್ಯಾಯ ಶ್ರೀಪೇಜಾವರ ಮಠದ ವತಿಯಿಂದ ಶ್ರೀ ಕೃಷ್ಣ ಮಠದಲ್ಲಿ ಜ.5ರಿಂದ 9ರವರೆಗೆ ರಾಜಾಂಗಣದಲ್ಲಿ ಪ್ರತಿರಾತ್ರಿ 7ರಿಂದ ಶ್ರೀಮನ್ನ್ಯಾಯ ಸುಧಾ ಮಂಗಳ ಮಹೋತ್ಸವದ ಅಂಗವಾಗಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ನಾಳೆ ಜ.5ರಂದು ಖ್ಯಾತ ನೃತ್ಯ ವಿದುಷಿ ಲಕ್ಷ್ಮಿ ಗೋಪಾಲಸ್ವಾಮಿ ಅವರಿಂದ ನೃತ್ಯ ವೈಭವ, 6ರಂದು ಅಂತಾರಾಷ್ಟ್ರೀಯ ಖ್ಯಾತಿಯ ನಂದಿ ಅವರಿಂದ ಇಂಡೊ- ಯುರೋಪಿಯನ್ ಬ್ಯಾಂಡ್, 7ರಂದು ಪ್ರಸಿದ್ಧ ಗಾಯಕ ಸಂಜಯ ಸುಬ್ರಹ್ಮಣ್ಯಮ್‌ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, 8ರಂದು ರಾಹುಲ್ ಶರ್ಮಾರಿಂದ ಸಂತೂರ್ ವಾದನ, 9ರಂದು ಪ್ರಸಿದ್ಧ ಗಾಯಕ ಕೆ. ಜೆ. ಯೇಸುದಾಸ್‌ರ ಪುತ್ರ ವಿಜಯ್ ಯೇಸುದಾಸ್‌ರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವಿದೆ ಎಂದು ಮಠದ ದಿವಾನರ ಪ್ರಕಟಣೆ ತಿಳಿಸಿದೆ.