×
Ad

ಉಡುಪಿ: ನಿರುಪಯುಕ್ತ ಕೊಳವೆ ಬಾವಿ ಕುರಿತು ಮಾಹಿತಿಗೆ ಸೂಚನೆ

Update: 2018-01-04 22:19 IST

ಉಡುಪಿ, ಜ.4: ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಕೊರೆದಿರುವ ವಿಫಲ/ನಿರುಪಯುಕ್ತ ಕೊಳವೆ ಬಾವಿ, ಬೋರ್‌ವೇಲ್‌ಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ಇದ್ದಲ್ಲಿ ಅಥವಾ ಅದನ್ನು ಕಂಡಲ್ಲಿ ಸಂಬಂಧಪಟ್ಟ ಗ್ರಾಪಂನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಹಾಗೂ ನಗರ ಪ್ರದೇಶಕ್ಕೆ ಸಂಬಂಧಿಸಿದಂತೆ ನಗರಸಭೆ, ಪುರಸಭೆಯ ಗುನಕ್ಕೆ ತರುವಂತೆ ಸೂಚಿಸಲಾಗಿದೆ.

ಉಳಿದಂತೆ ಉಡುಪಿ ಜಿಲ್ಲಾಧಿಕಾರಿ ಕಚೇರಿ(0820-2574802, ಟೋಲ್ ಫ್ರೀಸಂಖ್ಯೆ 1077), ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ (0820- 2574938), ಉಡುಪಿ ಹಿರಿಯ ಭೂವಿಜ್ಞಾನಿ ಜಿಲ್ಲಾ ಅಂತರ್ಜಲ ಕಚೇರಿ (0820-2574376), ಕಾರ್ಕಳ ತಾಪಂ(08258-230203), ಕುಂದಾಪುರ ತಾಪಂ(08254-230360), ಉಡುಪಿ ತಾಪಂ(0820-2520447), ಉಡುಪಿ ನಗರಸಭೆ (0820-2520306), ಕುಂದಾಪುರ ಪುರಸಭೆ (08254 -235410), ಕಾರ್ಕಳ ಪುರಸಭೆ (08258-235664), ಸಾಲಿಗ್ರಾಮ ಪಟ್ಟಣ ಪಂಚಾಯತ್ (0820-2564229) ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ ದೂರು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News