×
Ad

ಹೊಗೆ ಬಝಾರ್: ಸೈಕಲ್ ಶಾಪ್‌ಗೆ ಕಲ್ಲೆಸೆತ

Update: 2018-01-04 22:37 IST

ಮಂಗಳೂರು, ಜ.4: ನಗರದ ಹೊಗೆ ಬಝಾರ್‌ನಲ್ಲಿರುವ ತಾಜ್ ಸೈಕಲ್ ಶಾಪ್‌ಗೆ ಬುಧವಾರ ರಾತ್ರಿ ದುಷ್ಕರ್ಮಿಗಳು ಕಲ್ಲೆಸೆದು ಹಾನಿಗೈದ ಬಗ್ಗೆ ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ.

ಕೆಲಸಗಾರರು ಗುರುವಾರ ಬೆಳಗ್ಗೆ ಸೈಕಲ್ ಶಾಪ್‌ಗೆ ತೆರಳಿದಾಗ ಮೇಲ್ಗಡೆ ಇದ್ದ ಗೋದಾಮಿನ ಕಿಟಕಿಯ ಗಾಜಿಗೆ ಕಲ್ಲು ಎಸೆದು ಹಾನಿಗೈದ ಬಗ್ಗೆ ತಿಳಿದುಬಂದಿದ್ದು, ಈ ಬಗ್ಗೆ ಶಾಪ್‌ನ ಮಾಲಕ ಎಸ್.ಎಂ.ಮುತ್ತಲಿಬ್ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾತ್ರಿ ಸುಮಾರು 11:32ಕ್ಕೆ ದುಷ್ಕರ್ಮಿಗಳು ದೂರದಲ್ಲಿ ನಿಂತು ಕಲ್ಲೆಸೆದಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ಮಾಲಕ ಮುತ್ತಲಿಬ್ ‘ಪತ್ರಿಕೆ’ಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News