ಫೆ.18ರಿಂದ ಅಡ್ಯಾರ್ ಕಣ್ಣೂರಿನಲ್ಲಿ ಉರೂಸ್ ಕಾರ್ಯಕ್ರಮ
ಮಂಗಳೂರು, ಜ. 4: ಅಡ್ಯಾರ್ ಕಣ್ಣೂರು ಬದ್ರಿಯಾ ಮಸೀದಿ ವಠಾರದಲ್ಲಿ ಹಝ್ರತ್ ಶೈಖ್ ಯೂಸುಫ್ ಸಿದ್ದೀಖಿ (ಖ.ಸಿ) ವಲಿಯುಲ್ಲಾಹಿ ಹೆಸರಿನಲ್ಲಿ ಪ್ರತಿ 3 ವರ್ಷಗಳಿಗೊಮ್ಮೆ ನಡೆಸಿಕೊಂಡು ಬರುತ್ತಿರುವ ಉರೂಸ್ ಕಾರ್ಯಕ್ರಮವು ಫೆ.18ರಿಂದ 25ರವರೆಗೆ ನಡೆಯಲಿದೆ.
ಫೆ. 18ರಂದು ಸಂಜೆ 4ಗಂಟೆಗೆ ಕೂಟು ಝಿಯಾರತ್ ನೇತೃತ್ವವನ್ನು ಜಬ್ಬಾರ್ ಉಸ್ತಾದ್ ಮಿತ್ತಬೈಲ್ ವಹಿಸಲಿದ್ದಾರೆ. ಧ್ವಜರೋಹಣದ ನೇತೃತ್ವವನ್ನು ಜಿಲ್ಲಾ ಖಾಝಿ ತ್ವಾಖ ಅಹ್ಮದ್ ಮುಸ್ಲಿಯಾರ್ ವಹಿಸಲಿದ್ದಾರೆ. ಈ ಸಂದರ್ಭ ಅನ್ಸಾರ್ ಫೈಝಿ ಮತ್ತು ಇಸ್ಮಾಯಿಲ್ ಮದನಿ ಉಪಸ್ಥಿತರಿರುವರು.
ಅಂದು ರಾತ್ರಿ 8ಗಂಟೆಗೆ ಉದ್ಘಾಟನೆ ಸಮಾರಂಭ ಮತ್ತು ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಸೈಯದ್ ಆಟಕೋಯ ತಂಙಳ್ ಕುಂಬೋಲ್, ಉದ್ಘಾಟನೆಯನ್ನು ಬೇಕಲ ಉಸ್ತಾದ್ ನೇತೃತ್ವದಲ್ಲಿ ನಡೆಯಲಿದ್ದು, ಅಸೈಯ್ಯದ್ ಮುಖ್ತಾರ್ ತಂಙಲ್ ಕುಂಬೋಲ್ ದುಆ ಆರ್ಶಿವಚನ ನೀಡಲಿದ್ದಾರೆ. ಈ ಸಂದರ್ಭ ಆಲಿಕುಂಜಿ ಉಸ್ತಾದ್ ಉಪಸ್ಥಿತರಿದ್ದು, ಅನ್ಸಾರ್ ಫೈಝಿ ಪ್ರಾಸ್ತವಿಕವಾಗಿ ಮಾತನಾಡಲಿದ್ದಾರೆ ಮತ್ತು ಮುಖ್ಯ ಪ್ರಭಾಷಣಕಾರರಾಗಿ ಇಬ್ರಾಹಿಂ ಮುಸ್ಲಿಯಾರ್ ಖಾಝಿ ಕೃಷ್ಣಾಪುರ ರವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಫೆ. 19ರಂದು ಸೈಯ್ಯದ್ ಝೈನುಲ್ ಆಬಿದೀನ್ ತಂಙಲ್ ದುವಾ ಆರ್ಶಿವಚನಗೈಯ್ಯಲಿದ್ದು, ಅಬ್ದುಲ್ ಮಜೀದ್ ಬಾಖವಿ ಮುಖ್ಯ ಪ್ರಭಾಷಣಗೈಯ್ಯಲಿದ್ದಾರೆ.
ಫೆ. 20ರಂದು ಸೈಯ್ಯದ್ ಝೈನುಲ್ ಆಬಿದೀನ್ ತಂಙಲ್ ದುವಾ ಆರ್ಶಿವಚನಗೈಯ್ಯಲಿದ್ದು, ರಫೀಕ್ ಸಹದಿ ದೇಲಂಪಾಡಿ ಮುಖ್ಯ ಪ್ರಭಾಷಣಗೈಯ್ಯಲಿದ್ದಾರೆ.
ಫೆ. 21ರಂದು ಅಸೈಯ್ಯದ್ ಝೈನುಲ್ ಆಬಿದೀನ್ ತಂಙಲ್ ದುಗ್ಗಲಡ್ಕ ದುವಾ ಆರ್ಶಿವಚನಗೈಯಲಿದ್ದು, ಅಬ್ದುಲ್ ಅಝೀಝ್ ದಾರಿಮಿ ಪೊವ್ವಲ್ ಕಾಸರಗೋಡು ಆಶಂಸ ಪ್ರಭಾಷಣಗೈಲಿದ್ದಾರೆ. ಅಬ್ದುಲ್ ಅಝೀಝ್ ಅಶ್ರಫಿ ಪಾಣತ್ತೂರು ಮುಖ್ಯ ಪ್ರಭಾಷಣಗೈಯಲಿದ್ದಾರೆ.
ಫೆ. 22ರಂದು ಅಸೈಯ್ಯದ್ ಅತ್ತಾವುಲ್ಲಾ ತಂಙಲ್ ಮಂಜೇಶ್ವರ ದುವಾ ಆರ್ಶಿವಚನಗೈಯಲಿದ್ದು, ಫಾರೂಖ್ ನಿಈಮಿ ಮುಖ್ಯ ಪ್ರಭಾಷಣಗೈಯಲಿದ್ದಾರೆ.
ಫೆ. 23ರಂದು ಬೃಹತ್ ಸೌಹಾರ್ದ ಸಮಾವೇಶ ಸಮಾರಂಭ ನಡೆಯಲಿದ್ದು, ರಾಜ್ಯದ ಗೌರವಾನ್ವಿತ ಮಂತ್ರಿಗಳು, ಶಾಸಕರು, ಸಾಮಾಜಿಕ, ರಾಜಕೀಯ ಧುರೀಣರು ಭಾಗವಹಿಸಲಿದ್ದಾರೆ. ಅಂದು ರಾತ್ರಿ 8 ಗಂಟೆಗೆ ಅಸೈಯ್ಯದ್ ಅಲೀ ತಂಙಲ್ ಕುಂಬೋಲ್ ರವರು ದುವಾ ಆರ್ಶಿವಚನಗೈಯಲಿದ್ದು, ಸ್ವದಖತುಲ್ಲ ಫೈಝಿ ಆಶಂಸ ಪ್ರಭಾಷಣಗೈಯ್ಯಲಿದ್ದು. ಅನ್ಸಾರ್ ಫೈಝಿ ಮುಖ್ಯ ಪ್ರಭಾಷಣಗೈಯಲಿದ್ದಾರೆ.
ಫೆ. 24ರಂದ ಅಸರ್ ನಮಾಜಿನ ಬಳಿಕ ಹಾಪಿಲ್ ಸಿರಾಜುದ್ದೀನ್ ಖಾಸಿಮಿ ಮುಖ್ಯ ಪ್ರಭಾಷಣಗೈಯಲಿದ್ದಾರೆ. ಅಂದು ರಾತ್ರಿ 8ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಅಧ್ಯಕ್ಷತೆಯನ್ನು ಅಸೈಯ್ಯದ್ ಜಿಫ್ರಿ ಮುತ್ತುಕೋಯ ತಂಙಲ್ ವಹಿಸಲಿದ್ದು, ಅಸೈಯ್ಯದ್ ಹೈದರಲೀ ಶಿಹಾಬ್ ತಂಙಲ್, ಪಾಣಕ್ಕಾಡ್ ದುವಾರ್ಶಿವಚನ ನೀಡುವರು. ಪ್ರೊಪೆಸರ್ ಅಲಿಕುಟ್ಟಿ ಉಸ್ತಾದ್ ಕಾರ್ಯಕ್ರಮ ಉದ್ಘಾಟನೆ ಮಾಡುವರು.
ಈ ಸಂದರ್ಭ ತ್ವಾಖ ಅಹ್ಮದ್ ಮುಸ್ಲಿಯಾರ್, ಶೈಖುನಾ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್, ಅಲ್ಹಾಜ್ ವಿ.ಕೆ. ಅಬೂಬಕ್ಕರ್ ಮುಸ್ಲಿಯಾರ್, ಅನ್ಸಾರ್ ಫೈಝಿ, ಖಾಸಿಂ ಮುಸ್ಲಿಯಾರ್ ತಾಯಲಂಗಾಡಿ, ಅಸೈಯ್ಯದ್ ಝೈನುಲ್ ಆಬಿದೀನ್ ಜಿಪ್ರಿ ತಂಙಲ್, ಹಾರೂನ್ ಅಹ್ಸನಿ ಕೋಟೆಕಾರ್, ಝೈನ್ ಸಖಾಫಿ ಉಳ್ಳಾಲ, ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಇಸ್ಮಾಯಿಲ್ ಮದನಿ, ಮುಹಮ್ಮದ್ ಫೈಝಿ ಉಪಸ್ಥಿತರಿರುವರು.
ಬಿ.ಜಿ.ಎಮ್. ಅಡಾರ್ ಕಣ್ಣೂರು ಅಧ್ಯಕ್ಷ ಎಸ್ ಅಬ್ದುಲ್ ರಹಿಮಾನ್, ಪ್ರಧಾನ ಕಾರ್ಯದರ್ಶಿ ಎ.ಕೆ.ಅಹ್ಮದ್ ಇಖ್ಬಾಲ್, ಬಿಜಿಎಮ್ ಪದಾಧಿಕಾರಿಗಳಾದ ಕೆ.ಬಿ. ಅಬ್ದುಲ್ ರಹಿಮಾನ್, ಡಿ.ಎಮ್.ಮುಹಮ್ಮದ್, ಟ್ಯಾಲೆಂಟ್ ರಿಸರ್ಚ ಪೌಂಡೇಶನ್ ನ ಡಿ. ಹಮೀದ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.