ಮಾಡಿ ಕಲಿಯುವುದರಿಂದ ಮಕ್ಕಳ ಬೆಳವಣಿಗೆಗೆ ಹೆಚ್ಚು ಶಕ್ತಿ ಸಿಗುತ್ತದೆ: ಪುರುಷೂತ್ತಮ್.ಟಿ

Update: 2018-01-05 16:02 GMT

ಕಂಕನಾಡಿ, ಜ. 5: ಸ್ನೇಹ ಪಬ್ಲಿಕ್ ಸ್ಕೊಲ್ ಪಕ್ಕಲಡ್ಕ ಇದರ ದಶಮಾನೊತ್ಸವದ ಪ್ರಯುಕ್ತ "ಎಕ್ಸ್‌ಪೀರಿಯಾ-2018" ಎರಡು ದಿನದ ಮಕ್ಕಳ ವಸ್ತು ಪ್ರದರ್ಶನದ ಉಧ್ಘಾಟನಾ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ಡಿಡಿಪಿಐ ಸಾಯೈನ್ಸ್ ಇನ್ಸಪೆಕ್ಟರ್ ಆಗಿರುವ ಪುರುಷೂತ್ತಮ್.ಟಿ ಅವರು ಮಕ್ಕಳು ನಿರ್ಮಿಸಿದ ಜ್ವಾಲಾಮುಖಿ ಪ್ರಯೂಗಕ್ಕೆ ಚಾಲನೆ ನೀಡಿದರು. ಮಕ್ಕಳ ವಸ್ತು ಪ್ರದರ್ಶನವನ್ನು ವೀಕ್ಷಿಸಿದ ನಂತರ ಮಾತನಾಡಿದ ಅವರು " ಮಕ್ಕಳ ಅಧ್ಯಾಯನಕ್ಕೆ ಕೇವಲ ಪಾಠ ಪುಸ್ತಕಗಳು ಸಾಕಾಗಲಾರದು. ವಿಜ್ಞಾನ ರಂಗದಲ್ಲಿ ಭಾರತ ಬೆಳೆಯುತ್ತಿರುವಂತೆ ವಿಧ್ಯಾರ್ಥಿಗಳು ಬೇಳೆಯಬೇಕು, ಮಾಡಿ ಕಲಿಯುವುದರಿಂದ ಮಕ್ಕಳ ಬೆಳವಣಿಗೆಗೆ ಹೆಚ್ಚು ಶಕ್ತಿ ಸಿಗುತ್ತದೆ ಸ್ನೇಹ ಪಬ್ಲಿಕ್  ಸ್ಕೊಲ್ ಮಕ್ಕಳಿಂದಲೇ ಸರ್ವರಿಗೂ ಪ್ರಯೋಜನವಾಗುವಂತೆ ವಿಜ್ಞಾನ, ಗಣಿತ, ಇತಿಹಾಸ ಭಾಷೆ, ಕಲೆ ಮತ್ತು ಸಂಸ್ಕೃತಿ ಆರ್ಟ್ ಮತ್ತು ಕ್ರಾಫ್ಟ್ ಮೊದಲಾದ ಹಲವಾರು ವಿಷಯಗಳನ್ನೂಳಗೊಂಡ ವಸ್ತುಪ್ರದರ್ಶನ ಏರ್ಪಡಿಸಿರುವುದು ಬಹಳ ಸಂತೂಷದ ವಿಷಯ. ಮುಖ್ಯವಾಗಿ ಮೌಲ್ಯ ಶಿಕ್ಷಣ ವಿಭಾಗದಲ್ಲಿ ಸರ್ವ ಧರ್ಮ ಸಮಭಾವದ ಮತ್ತು ಮಾನವೀಯ ಮೌಲ್ಯದ ಬಗ್ಗೆ ವಿವರಿಸಿರುವುದು, 9ನೇ ತರಗತಿವರೆಗೆ ಇರುವ ಸಣ್ಣಮಟ್ಟದ ಶಾಲೆಯಲ್ಲಿ ವಿಜ್ಞಾನ ವಿಭಾಗದಲ್ಲಿ ದೊಡ್ಡಮಟ್ಟದ ಪ್ರದರ್ಶನವನ್ನು ಪ್ರದರ್ಶಸಿರುವುದು ದೊಡ್ಡ ಸಾಹಸವಾಗಿದೆ ಆರ್ಟ್ ಮತ್ತು ಕ್ರಾಫ್ಟ್ ಉತ್ತಮವಾಗಿ ಮೂಡಿ ಬಂದಿದೆ. ಆಡಿಕಲಿ, ನೂಡಿಕಲಿ, ಮಾಡಿಕಲಿ, ಎಂಬ್ ಶಿಕ್ಷಣ ರೀತಿಗೆ "ಎಕ್ಸ್‌ಪೀರಿಯಾ-2018"  ಸಾಕ್ಷಿಯಾಗಿದೆ ಎಂದರು.

ಶಾಲಾ ಸಂಚಾಲಕಲಾರಾದ ಯೂಸುಫ್ ಪಕ್ಕಲಡ್ಕ ಮುಖ್ಯ ಅತಿಥಿಗಳಿಗೆ ಕಿರು ಕಾಣಿಕೆಯನ್ನು ನೀಡಿದರು. ಅಧ್ಯಾಪಕಿ ಕನೇರ್ ಫಾತಿಮ ಸ್ವಾಗತಿಸಿದರು.

ಹೆತ್ತವರ ಸಂಘದ ಅಧ್ಯಕ್ಷರಾದ ಪಿ.ಬಿ ಮುಹಮ್ಮದ್, ನೂರುಲ್ ಅಮೀನ್ ಪಕ್ಕಲಡ್ಕ, ಹಮೀದ್ ಪಕ್ಕಲಡ್ಕ, ಮುಹ್ಸಿನ್ ಮುಖ್ಯಧ್ಯಾಪಕಿ ನಾಗರತ್ನ, ಸಹ ಮುಖ್ಯ ಶಿಕ್ಷಕಿ ಜುವೈರಿಯಾ ಸಂಹಾ ವೇಧಿಕೆಯಲ್ಲಿ ಉಪಸ್ಥಿತರಿದ್ದರು.

ಈವೆಂಟ್ ಸಂಘಟಕರಾದ ಅಶೀರುದ್ದೀನ್ ಆಲಿಯಾ, ನುಶ್ರತ್ ಕುರೇಶ್ ಸಹಕರಿಸಿದರು ನಿತಾಶಾ ಕಾರ್ಯಕ್ರಮ ನಿರೂಪಿಸಿದರು. ಆಶಾ ನಾಯಕ್ ವಂದಿಸಿದರು. ಅಬ್ದುಲ್ಲ ಫೈರೋರ್ ಕಿರಾಅತ್ ಪಠಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News