×
Ad

ಬಾಳೆಬರೆ ಘಾಟಿಯಲ್ಲಿ ಬೆಂಕಿಗೆ ಅಹುತಿಯಾದ ಲಾರಿ

Update: 2018-01-05 22:38 IST

ಅಮಾಸೆಬೈಲು, ಜ.5: ಇಲ್ಲಿಗೆ ಸಮೀಪದ ಬಾಳೆಬರೆ ಘಾಟಿಯ ಶ್ರೀಚಂಡಿ ಕಾಂಬ ದೇವಸ್ಥಾನದ ಬಳಿ ಇಂದು ಬೆಳಗಿನ ಜಾವ 6ಗಂಟೆ ಸುಮಾರಿಗೆ ಲಾರಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇದರ ಪರಿಣಾಮ ಲಾರಿಯು ಭಾಗಶಃ ಸುಟ್ಟು ಹೋಗಿರುವ ಬಗ್ಗೆ ವರದಿಯಾಗಿದೆ.

ಹೊಸಂಗಡಿ ಕಡೆಯಿಂದ ಹೊಸನಗರ ಕಡೆಗೆ ಕಲ್ಲಿದ್ದಲು ಸಾಗಿಸುತ್ತಿದ್ದ ಲಾರಿಯ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತೆನ್ನಲಾಗಿದೆ. ಇದನ್ನು ಅರಿತ ಚಾಲಕ ಕೂಡಲೇ ಲಾರಿಯನ್ನು ರಸ್ತೆಯ ಬದಿ ನಿಲ್ಲಿಸಿ ಸ್ಥಳೀಯರಿಗೆ ತಿಳಿಸಿದನು. ಬೆಂಕಿಯು ವಿಸ್ತರಿಸುತ್ತಿದ್ದಂತೆ ಅಮಾಸೆಬೈಲು ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಸ್ಥಳೀಯರು ಆಗಮಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದರು.

ತಕ್ಷಣವೇ ಬೆಂಕಿ ನಿಯಂತ್ರಣಕ್ಕೆ ಬಂತೆನ್ನಲಾಗಿದೆ. ಈ ಬೆಂಕಿ ಅವಘಡದಿಂದ ಲಾರಿಯ ಬಲಭಾಗದ ಟಯರ್‌ಗಳು, ಚಾಲಕ ಸೀಟು, ಮುಂದಿನ ಭಾಗ ಸಂಪೂರ್ಣ ಬೆಂಕಿಗೆ ಅಹುತಿಯಾಗಿದೆ. ಚಾಲಕ ಯಾವುದೇ ಪ್ರಾಣಪಾಯ ವಿಲ್ಲದೆ ಪಾರಾಗಿದ್ದಾರೆ. ಅನಾಹುತದಿಂದ ಲಕ್ಷಾಂತರ ನಷ್ಟ ಉಂಟಾಗಿರುವು ದಾಗಿ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News