×
Ad

ವಳಕಾಡು ಶಾಲೆಗೆ ಸೋಲಾರ್ ಪ್ಯಾನೆಲ್: ಜ.6ರಂದು ಉದ್ಘಾಟನೆ

Update: 2018-01-05 22:52 IST

ಉಡುಪಿ, ಜ.5: ಕರ್ನಾಟಕ ಬ್ಯಾಂಕ್‌ನಿಂದ ಸಿಎಸ್‌ಆರ್ ಯೋಜನೆಯಡಿ ನೀಡಲ್ಪಟ್ಟ ಅನುದಾನದಿಂದ ವಳಕಾಡಿನ ಸರಕಾರಿ ಸಂಯುಕ್ತ ಪ್ರೌಢ ಶಾಲೆಗೆ ಸುಮಾರು ಆರು ಲಕ್ಷ ರೂ. ವೆಚ್ಚದಲ್ಲಿ ಅಳವಡಿಸಲಾದ ಪರಿಸರ ಸ್ನೇಹಿ ಸೌರ ವಿದ್ಯುತ್ ಘಟಕದ ಉದ್ಘಾಟನಾ ಸಮಾರಂಭ  ಜ.6ರಂದು ಬೆಳಗ್ಗೆ 11ಗಂಟೆಗೆ ಶಾಲೆಯ ನಲಂದಾ ಸಭಾ ಭವನದಲ್ಲಿ ನಡೆಯಲಿದೆ.

 ಕರ್ನಾಟಕ ಬ್ಯಾಂಕ್‌ನ ಎಜಿಎಂ ರಾಘವೇಂದ್ರ ಭಟ್ ಸೌಲಭ್ಯವನ್ನು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಜಿಪಂ ಅಧ್ಯಕ್ಷ ದಿನಕರ ಬಾಬು ಹಾಗೂ ಇತರರು ಭಾಗವಹಿಸುವರು ಎಂದು ಶಾಲೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News