ಮುದರಂಗಡಿ: ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ
ಪಡುಬಿದ್ರೆ, ಜ. 5: ಎಲ್ಲೂರು ವೈ2ಕೆ ಫ್ರೆಂಡ್ಸ್ ಮುದರಂಗಡಿ ಸಾರ್ವಜನಿಕ ಮೈದಾನದಲ್ಲಿ ಮೂರು ದಿನಗಳ ಕಾಲ ಆಯೋಜಿಸಿದ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಶುಕ್ರವಾರ ನಡೆಯಿತು.
ಪಂದ್ಯಾಟವನ್ನು ಉದ್ಘಾಟಿಸಿದ ಮಾಜಿ ಶಾಸಕ ಲಾಲಾಜಿ ಮೆಂಡನ್, ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಲು ಕ್ರೀಡೆ ಅತೀ ಅಗತ್ಯ. ಕ್ರಿಕೆಟ್ ಅತೀ ಜನಪ್ರತಿಯ ಕ್ರೀಡೆಯಾಗಿದ್ದರೂ ಇತ್ತೀಚಿನ ದಿನಗಳಲ್ಲಿ ವ್ಯಾವಹಾರಿಕವಾಗಿ ಬೆಳೆಯುತ್ತಿರುವುದು ಖೇದಕರ ಎಂದರು.
ಎಲ್ಲೂರು ಗ್ರಾಪಂ ಮಾಜಿ ಅಧ್ಯಕ್ಷ ಯಶವಂತ ಶೆಟ್ಟಿ ಬೇಸರ ಮಾತನಾಡಿ, ಹಿಂದೆ ಟ್ರೋಫಿ ನೋಡಿ ಸ್ಪರ್ಧಾತ್ಮಕವಾಗಿ ಕ್ರಿಕೆಟ್ ಆಡಲಾಗುತ್ತಿತ್ತು. ಆದರೆ ಇಂದು ಟ್ರೋಫಿ ಬಗ್ಗೆ ಯಾರಿಗೂ ಆಸಕ್ತಿ ಇಲ್ಲವಾಗಿದೆ. ಕ್ರಿಕೆಟ್ ಸಂಘಟಕರು ಗ್ರಾಮೀಣ ಕ್ರೀಡಾಪಟುಗಳಿಗೆ ಅವಕಾಶ ನೀಡಬೇಕು ಎಂದರು.
ಒಗ್ಗಟ್ಟಿನ ಸಂದೇಶ ನೀಡಲು ಕ್ರಿಕೆಟ್‌ನಿಂದ ಸಾಧ್ಯ. ಕ್ರೀಡೆ ಮನೋರಂಜನೆ ಜೊತೆಗೆ ದೈಹಿಕ ಆರೋಗ್ಯ ಹಾಗೂ ನೆಮ್ಮದಿ ನೀಡುತ್ತದೆ ಎಂದು ಪಂದ್ಯಾಕೂಟವನ್ನು ಉದ್ಘಾಟಿಸಿದ ಮುದರಂಗಡಿ ಸುನ್ನೀ ಜಾಮೀಯಾ ಮಸೀದಿಯ ಮಾಜಿ ಖತೀಬ ಇದ್ರಿಸ್ ರಝ್ವಿ ಹೇಳಿದರು.
ವೈ2ಕೆ ಫ್ರೆಂಡ್ಸ್ ಅಧ್ಯಕ್ಷ ಮೊಹಮ್ಮದ್ ಆರೀಫ್ ಅಧ್ಯಕ್ಷತೆ ವಹಿಸಿದ್ದರು. ಎಲ್ಲೂರು ಗ್ರಾಪಂ ಅಧ್ಯಕ್ಷೆ ವಸಂತಿ ಮಧ್ವರಾಜ್, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಮುದರಂಗಡಿ ಸೇಂಟ್ ಕ್ಸೇವಿಯರ್ ಚರ್ಚ್‌ನ ಧರ್ಮಗುರು ಫ್ರಾನ್ಸಿಸ್ ಲಿವಿಸ್, ಎಲ್ಲೂರು ವಿಶ್ವೇಶರ ದೇವಸ್ಥಾನದ ಅರ್ಚಕ ಶಂಕರನಾರಾಯಣ ಭಟ್, ಎಲ್ಲೂರು ಸುನ್ನೀ ಜಾಮೀಯಾ ಮಸೀದಿ ಕಾರ್ಯದರ್ಶಿ ರಿಯಾಜ್ ಮುದರಂಗಡಿ, ಪಡುಬಿದ್ರಿ ರೋಟರಿ ಅಧ್ಯಕ್ಷ ರಮೀಜ್ ಹುಸೈನ್, ಮಾಜಿ ಅಧ್ಯಕ್ಷ ಅಬ್ದುಲ್ ಹಮೀದ್ ಉಪಸ್ಥಿತರಿದ್ದರು.