ಪಾಕ್‌ಗೆ ನೆರವು ಸ್ಥಗಿತಕ್ಕೂ ಹಫೀಝ್ ಸಯೀದ್‌ಗೂ ಸಂಬಂಧವಿಲ್ಲ: ಅಮೆರಿಕಾ

Update: 2018-01-05 17:37 GMT

ವಾಶಿಂಗ್ಟನ್, ಜ. 5: ಪಾಕಿಸ್ತಾನಕ್ಕೆ ನೀಡಬೇಕಾಗಿದ್ದ 1.1 ಬಿಲಿಯ ಡಾಲರ್ (ಸುಮಾರು 7,000 ಕೋಟಿ ರೂಪಾಯಿ) ರಕ್ಷಣಾ ನೆರವನ್ನು ಸ್ಥಗಿತಗೊಳಿಸುವ ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತದ ನಿರ್ಧಾರಕ್ಕೂ ಮುಂಬೈ ಭಯೋತ್ಪಾದಕ ದಾಳಿಯ ರೂವಾರಿ ಹಫೀಝ್ ಸಯೀದ್ ವಿರುದ್ಧ ಪಾಕಿಸ್ತಾನ ಕ್ರಮ ತೆಗೆದುಕೊಳ್ಳದಿರುವುದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರೆ ಹೆದರ್ ನೋವರ್ಟ್ ಹೇಳಿದ್ದಾರೆ.

ಪಾಕಿಸ್ತಾನಕ್ಕೆ ನೀಡಬೇಕಾಗಿದ್ದ ರಕ್ಷಣಾ ನೆರವನ್ನು ನಿಲ್ಲಿಸಿರುವುದಕ್ಕೂ ಮುಂಬೈ ದಾಳಿಯ ರೂವಾರಿ ಹಫೀಝ್ ಸಯೀದ್‌ಗೂ ಸಂಬಂಧವಿದೆಯೇ ಎಂಬ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.

ಗೃಹಬಂಧನದಲ್ಲಿದ್ದ ಸಯೀದ್‌ನನ್ನು ಪಾಕಿಸ್ತಾನ ನವೆಂಬರ್‌ನಲ್ಲಿ ಬಿಡುಗಡೆ ಮಾಡಿತ್ತು.

ಭಯೋತ್ಪಾದನೆ ನಿಗ್ರಹ ಬಗ್ಗೆ ಅಮೆರಿಕ ಪಾಕಿಸ್ತಾನದ ಜೊತೆಗಿನ ಮಾತುಕತೆಯನ್ನು ಮುಂದುವರಿಸುವುದು ಹಾಗೂ ಇಂಥ ಮಾತುಕತೆಗಳಲ್ಲಿ ಹಕ್ಕಾನಿ ನೆಟ್‌ವರ್ಕ್ ಮತ್ತು ತಾಲಿಬಾನ್ ಬಗ್ಗೆ ಮಾತ್ರವಲ್ಲ, ಲಷ್ಕರ್ ಎ ತೊಯ್ಬಾ ಮತ್ತು ಜೈಶೆ ಮುಹಮ್ಮದ್ ಮುಂತಾದ ಭಾರತವನ್ನು ಗುರಿಯಿರಿಸಿ ಭಯೋತ್ಪಾದನೆ ನಡೆಸುವ ಸಂಘಟನೆಗಳ ಬಗ್ಗೆಯೂ ಪ್ರಸ್ತಾಪಿಸಲಾಗುವುದು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News