ದೀಪಕ್ ಮನೆಗೆ ಮೊಯ್ದಿನ್ ಬಾವಾ, ಐವನ್ ಭೇಟಿ
Update: 2018-01-05 23:18 IST
ಮಂಗಳೂರು, ಜ.5: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಸುರತ್ಕಲ್ ಸಮೀಪದ ಕಾಟಿಪಳ್ಳ ನಿವಾಸಿ ದೀಪಕ್ ಮನೆಗೆ ಸ್ಥಳೀಯ ಶಾಸಕ ಬಿ.ಎ.ಮೊಯ್ದಿನ್ ಬಾವಾ ಮತ್ತು ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಈಗಾಗಲೇ ಸರಕಾರದಿಂದ ಪರಿಹಾರಧನ ಘೋಷಣೆಯಾಗಿದ್ದು,ಇನ್ನೂ ಹೆಚ್ಚಿನ ಪರಿಹಾರಧನ ದೊರಕಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಬಳಿಕ ಸುರತ್ಕಲ್ ಮತ್ತು ಕೊಟ್ಟಾರ ಚೌಕಿಯಲ್ಲಿ ಹಲ್ಲೆಗೊಳಗಾಗಿ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಶೀರ್ ಮತ್ತು ಮುಬಶ್ಶಿರ್‌ರನ್ನು ಭೇಟಿ ಮಾಡಿ ಚಿಕಿತ್ಸೆಯ ಖರ್ಚು-ವೆಚ್ಚಗಳನ್ನು ಸರಕಾರದಿಂದ ಭರಿಸಲು ಒತ್ತಾಯಿಸುವುದಾಗಿ ತಿಳಿಸಿದ್ದಾರೆ.