2 ವರ್ಷಗಳಲ್ಲಿ ಮೊದಲ ಮಾತುಕತೆಗೆ ಉತ್ತರ, ದಕ್ಷಿಣ ಕೊರಿಯ ಒಪ್ಪಿಗೆ

Update: 2018-01-05 17:58 GMT

ಸಿಯೋಲ್ (ದಕ್ಷಿಣ ಕೊರಿಯ), ಜ. 5: ತಮ್ಮ ಜಂಟಿ ಸೇನಾಭ್ಯಾಸವನ್ನು ಚಳಿಗಾಲದ ಒಲಿಂಪಿಕ್ಸ್ ಬಳಿಕದ ಸಮಯಕ್ಕೆ ಮುಂದೂಡಲು ಅಮೆರಿಕ ಮತ್ತು ದಕ್ಷಿಣ ಕೊರಿಯಗಳು ನಿರ್ಧರಿಸಿದ ಬಳಿಕ, ಎರಡು ವರ್ಷಗಳಿಗೂ ಅಧಿಕ ಅವಧಿಯಲ್ಲಿನ ತಮ್ಮ ಮೊದಲ ಮಾತುಕತೆ ನಡೆಸಲು ದಕ್ಷಿಣ ಕೊರಿಯ ಮತ್ತು ಉತ್ತರ ಕೊರಿಯಗಳು ಶುಕ್ರವಾರ ಒಪ್ಪಿಕೊಂಡಿವೆ.

ಅಮೆರಿಕ ಮತ್ತು ದಕ್ಷಿಣ ಕೊರಿಯಗಳ ನಡುವಿನ ಜಂಟಿ ಸೇನಾಭ್ಯಾಸದ ವಿರುದ್ಧ ಉತ್ತರ ಕೊರಿಯ ಯಾವತ್ತೂ ಕೆಂಡಕಾರುತ್ತಾ ಬಂದಿದೆ.

ಕೊರಿಯ ಪರ್ಯಾಯ ದ್ವೀಪದಲ್ಲಿ ಉತ್ತರ ಮತ್ತು ದಕ್ಷಿಣಗಳನ್ನು ವಿಭಜಿಸುವ ಸೇನಾರಹಿತ ವಲಯದಲ್ಲಿರುವ ಶಾಂತಿ ಗ್ರಾಮ ಪನ್ಮುಂಜೊಮ್‌ನಲ್ಲಿ ಜನವರಿ 9ರಂದು ಶಾಂತಿ ಮಾತುಕತೆ ನಡೆಯಲಿದೆ.

ಇದಕ್ಕೂ ಮೊದಲಿನ ಮಾತುಕತೆ 2015 ಡಿಸೆಂಬರ್‌ನಲ್ಲಿ ನಡೆದಿತ್ತು.

ಉತ್ತರ ಕೊರಿಯವು ಹಲವಾರು ಕ್ಷಿಪಣಿ ಹಾರಾಟಗಳು ಮತ್ತು ಪರಮಾಣು ಬಾಂಬ್ ಪರೀಕ್ಷೆಗಳನ್ನು ನಡೆಸಿರುವ ಹಿನ್ನೆಲೆಯಲ್ಲಿ 2017ರಲ್ಲಿ ಕೊರಿಯ ಪರ್ಯಾಯ ದ್ವೀಪದಲ್ಲಿ ಅತ್ಯಂತ ಉದ್ವಿಗ್ನ ಪರಿಸ್ಥಿತಿ ನೆಲೆಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News