ಅಮೆರಿಕ: 2040ರ ಹೊತ್ತಿಗೆ ಎರಡನೇ ಅತಿದೊಡ್ಡ ಧಾರ್ಮಿಕ ಸಮುದಾಯವಾಗಲಿದೆ ಇಸ್ಲಾಂ

Update: 2018-01-05 18:03 GMT

ವಾಶಿಂಗ್ಟನ್, ಜ.5: 2040ರಲ್ಲಿ ಅಮೆರಿಕದಲ್ಲಿ ಕ್ರೈಸ್ತರ ನಂತರ ಮುಸ್ಲಿಮರು ಅತೀದೊಡ್ಡ ಧಾರ್ಮಿಕ ಸಮುದಾಯವಾಗಲಿದ್ದಾರೆ ಎಂದು ಹೊಸ ವರದಿಯೊಂದು ತಿಳಿಸಿದೆ. 2017ರಲ್ಲಿ ಅಮೆರಿಕದಲ್ಲಿ 3ರಿಂದ 4.5 ಮಿಲಿಯನ್ ಮುಸ್ಲಿಮರು ವಾಸಿಸುತ್ತಿದ್ದು,ಅಲ್ಲಿನ ಒಟ್ಟಾರೆ ಜನಸಂಖ್ಯೆಯ ಶೇಕಡಾ 1.1ರಷ್ಟಿದ್ದಾರೆ ಎಂದು ಪ್ಯೂ ಸಂಶೋಧನಾ ಕೇಂದ್ರವು ನೀಡಿರುವ ವರದಿ ತಿಳಿಸಿದೆ.

ಸದ್ಯ ಕ್ರೈಸ್ತರ ನಂತರದ ಸ್ಥಾನದಲ್ಲಿ ಯಹೂದಿಗಳಿದ್ದು ಮೂರನೇ ಸ್ಥಾನದಲ್ಲಿ ಮುಸ್ಲಿಮರಿದ್ದಾರೆ. ಆದರೆ 2040ರ ವೇಳೆಗೆ ಇದು ಬದಲಾಗಲಿದ್ದು ಮುಸ್ಲಿಮರು ಎರಡನೇ ಸ್ಥಾನವನ್ನು ಪಡೆಯಲಿದ್ದಾರೆ ಎಂದು ವರದಿ ತಿಳಿಸಿದೆ. 2050ರ ವೇಳೆಗೆ ಅಮೆರಿಕನ್ ಮುಸ್ಲಿಮರ ಸಂಖ್ಯೆ 8.1 ಮಿಲಿಯನ್ ತಲುಪಲಿದ್ದು ಒಟ್ಟಾರೆ ಜನಸಂಖ್ಯೆಯ ಶೇಕಡಾ 2.1 ಆಗಲಿದ್ದಾರೆ. ಅಮೆರಿಕಾದಲ್ಲಿ ಮುಸ್ಲಿಮರ ಸಂಖ್ಯೆಯು ವರ್ಷಕ್ಕೆ 1,00,000ದ ದರದಲ್ಲಿ ಏರುತ್ತಿದೆ. ಅಮೆರಿಕಾಕ್ಕೆ ಮುಸ್ಲಿಮರ ವಲಸೆ ಮತ್ತು ಅಮೆರಿಕನ್ ಮುಸ್ಲಿಮರಲ್ಲಿರುವ ಹೆಚ್ಚಿನ ಫಲವತ್ತತೆ ದರವು ಇದಕ್ಕೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ. ಅಮೆರಿಕದಲ್ಲಿ ಕ್ರೈಸ್ತರು ಅತೀ ಹೆಚ್ಚು ಸಂಖ್ಯೆಯಲ್ಲಿದ್ದು ಒಟ್ಟಾರೆ ಜನಸಂಖ್ಯೆಯ ಶೇಕಡಾ 71ರಷ್ಟಿದ್ದಾರೆ. ಆದರೆ 2007ರಿಂದೀಚೆಗೆ ಮುಸ್ಲಿಮ್ ಜನಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News