ಜ.7: ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ವತಿಯಿಂದ ಹುಬ್ಬುನ್ನಬಿ ಸಮಾವೇಶ
Update: 2018-01-06 19:17 IST
ಮಂಗಳೂರು, ಜ.6: ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ (ದ.ಕ.) ವತಿಯಿಂದ ಪ್ರವಾದಿ ಸಂದೇಶ ಕಾರ್ಯಕ್ರಮ ಕಲ್ಲಡ್ಕ ಸಮೀಪದ ಬೋಳಂತೂರಿನಲ್ಲಿ ಜ.7ರಂದು ಸಂಜೆ 7 ಗಂಟೆಗೆ ನಡೆಯಲಿದೆ.
ರಫೀಕ್ ದಾರಿಮಿ ಕಿನ್ಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದು, ಹಾರಿಸ್ ಹನೀಫಿ ಪ್ರಾಸ್ತಾವಿಕ ಭಾಷಣಗೈಲಿದ್ದಾರೆ. ಮುಖ್ಯಪ್ರಭಾಷಣಕಾರರಾಗಿ ಯೂಸುಫ್ ಅಲ್ ಮಿಸ್ಬಾಹಿ ಮತ್ತು ಶಾಫಿ ಬೆಳ್ಳಾರೆ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.