×
Ad

ವರದಿ ತಯಾರಿಸಲು ಕೆಐಒಸಿಎಲ್‌ಗೆ ಸೂಚನೆ: ಸಚಿವ ಚೌಧರಿ ಬಿರೇಂದರ್ ಸಿಂಗ್

Update: 2018-01-06 19:47 IST

ಮಂಗಳೂರು, ಜ.6: ಮೈಸೂರಿನಲ್ಲಿ ಚಿನ್ನ ಮತ್ತು ತಮಿಳುನಾಡಿನ ತಿರುವೂರು ಪ್ರದೇಶದಲ್ಲಿ ಕಬ್ಬಿಣದ ನಿಕ್ಷೇಪಗಳು ಕಂಡುಬಂದಿದ್ದು, ಈ ನಿಟ್ಟಿನಲ್ಲಿ ಶೋಧ ಕಾರ್ಯ ನಡೆಸಲು ಕೆಐಒಸಿಎಲ್‌ಗೆ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಉಕ್ಕು ಸಚಿವ ಚೌಧರಿ ಬಿರೇಂದರ್ ಸಿಂಗ್ ತಿಳಿಸಿದ್ದಾರೆ.

ಅವರು ಇಂದು ಕೆಐಒಸಿಎಲ್ ಕಾರ್ಖಾನೆಯ ಖಾಲಿ ಜಾಗದಲ್ಲಿ 1 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕಕ್ಕೆ ಶಂಕುಸ್ಥಾಪನೆ, ಡಿಜಿಟಲ್ ಕಿಯೋಸ್ಕ್ ಉದ್ಘಾಟನೆಗೆ ಆಗಮಿಸಿದ್ದು ಅವರು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಅಲ್ಲಿ ಲಭ್ಯವಿರುವ ಅದಿರಿನ ಗುಣಮಟ್ಟ ಮತ್ತು ಪ್ರಮಾಣವೆಷ್ಟು ಎನ್ನುವ ವರದಿ ತಯಾರಿಸಿ ಸಲ್ಲಿಸುವಂತೆ ಕೆಐಒಸಿಎಲ್‌ಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ಹೊಸದಾಗಿ ಕಬ್ಬಿಣ ಅದಿರು ಲಭ್ಯವಾದರೆ ಮಂಗಳೂರಿನ ಕೆಐಒಸಿಎಲ್‌ನ ಕಾರ್ಯಕ್ಷಮತೆಯನ್ನು ಇನ್ನಷ್ಟು ವಿಸ್ತರಿಸಲು ಸಹಕಾರಿಯಾಗಲಿದೆ ಎಂದರು.

ಬಳ್ಳಾರಿಯಲ್ಲಿ ಈಗಾಗಲೇ ಗಣಿಗಾರಿಕೆ ನಡೆಯುತ್ತಿದ್ದು, 2 ಮಿಲಿಯನ್ ಟನ್ ಸಾಮರ್ಥ್ಯದ ಕಬ್ಬಿಣದ ಉಂಡೆ ತಯಾರಿ ಘಟಕವನ್ನು ಶೀಘ್ರದಲ್ಲೇ ಆರಂಭಿಸಲಾಗುವುದು. ವಿಶಾಖಪಟ್ಟಣದಲ್ಲಿ ಕಬ್ಬಿಣದ ಉಂಡೆ ತಯಾರಿ ಘಟಕ ಸ್ಥಾಪನೆ ಮಾಡುವ ಕುರಿತು ಅಲ್ಲಿನ ಆರ್‌ಐಎನ್‌ಎಲ್ ಸಂಸ್ಥೆಯೊಂದಿಗೆ ಕೆಐಒಸಿಎಲ್ ಒಪ್ಪಂದ ಮಾಲಾಗಿದೆ. ಶೀಘ್ರದಲ್ಲೇ ಅಲ್ಲಿ 1.2 ಮಿಲಿಯನ್ ಟನ್ ಸಾಮರ್ಥ್ಯದ ಘಟಕ ಸ್ಥಾಪನೆಗೆ ಚಾಲನೆ ನೀಡಲಾಗುವುದು ಎಂದು ಅವರು ಹೇಳಿದರು.

ಕೆಐಒಸಿಎಲ್‌ನಲ್ಲಿರುವ ಊದು ಕುಲುಮೆಯನ್ನು ಶೀಘ್ರವೇ ಮೇಲ್ದರ್ಜೆಗೆ ಏರಿಸಲಾಗುವುದು. ಈ ಕಾರ್ಯ ಮುಗಿದ ಕೂಡಲೆ ಇಲ್ಲಿ 2 ಲಕ್ಷ ಟನ್ ಸಾಮರ್ಥ್ಯದ ಡಿಐ (ಡಕ್ಟೈಲ್ ಐಯರ್ನ್) ಪೈಪ್‌ಗಳನ್ನು ತಯಾರಿಸುವ ಘಟಕ ಸ್ಥಾಪಿಸಲಾಗುವುದು. ಇದು ಕಾರ್ಯರೂಪಕ್ಕೆ ಬಂದರೆ ದೇಶದಲ್ಲೇ ಮೂರನೇ ಘಟಕ ಇದಾಲಿದೆ. ತುಕ್ಕು ರಹಿತ ಹಾೂ ಸೋರಿಕೆ ರಹಿತವಾಗಿರುವ ಈ ಪೈಪ್ ಗಳನ್ನು ನೀರು ವಿತರಣೆ ಕಾರ್ಯಗಳಿಗೆ ಬಳಕೆ ಮಾಡ ಬಹುದಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಕೆಐಒಸಿಎಲ್‌ನ ಊದು ಕುಲುಮೆ ಹತ್ತಿರ ಇರುವ 7 ಎಕರೆ ಜಾಗದಲ್ಲಿ ಒಂದು ಮೆಗಾವ್ಯಾಟ್ ಸಾಮರ್ಥ್ಯದ 8 ಕೋಟಿ ರು. ವೆಚ್ಚದ ಸೌರಶಕ್ತಿ ಘಟಕ ನಿರ್ಮಾಣ ಎರಡು ತಿಂಗಳೊಳಗೆ ಪೂರ್ಣವಾಗಲಿದೆ. ಕೆಐಒಸಿಎಲ್ ಚಟುವಟಿಕೆಗೆ ಈ ವಿದ್ಯುಚ್ಛಕ್ತಿಯನ್ನು ಬಳಕೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.

ಕೇಂದ್ರ ಉಕ್ಕು ಸಚಿವಾಲಯದ ಕಾರ್ಯದರ್ಶಿ ಡಾ. ಅರುಣಾ ಶರ್ಮ, ಸಚಿವಾಲಯದ ಅಧಿಕಾರಿಗಳಾದ ಟಿ. ಶ್ರೀನಿವಾಸ್, ಉರುವಿಲ್ಲಾ ಕತ್ತಿ, ಕೆಐಒಸಿಎಲ್ ಸಿಎಂಡಿ ಎಂ.ವಿ ಸುಬ್ಬರಾವ್ ಹಾಗು ಸಿಬ್ಬಂದಿ ಉಪಸ್ಥಿತರಿದ್ದರು.

ಕೆಐಒಸಿಎಲ್ ಮಿನಿ ರತ್ನದಿಂದ ರತ್ನವಾಗಿ ಮೇಲ್ದರ್ಜೆಗೆ

ಕಳೆದ ಸಾಲಿನಲ್ಲಿ ಕೆಐಒಸಿಎಲ್ 28 ಕೋಟಿ ರೂ. ಲಾಭ ಗಳಿಸಿದೆ. ಕೇಂದ್ರ ಸರ್ಕಾರದ ಮಿನಿ ರತ್ನವಾಗಿರುವ ಕೆಐಒಸಿಎಲ್‌ನ್ನು ಇನ್ನು ಒಂದೆರಡು ವರ್ಷದೊಳಗೆ ಕನಿಷ್ಠ 2500 ಕೋಟಿ ರೂ. ವಹಿವಾಟು ನಡೆಸುವ ‘ರತ್ನ’ವನ್ನಾಗಿ ಪರಿವರ್ತಿಸಲಾಗುವುದು ಎಂದು ಬಿರೇಂದರ್ ಸಿಂಗ್ ಹೇಳಿದರು.

ಅದಿರನ್ನು ಬ್ರೆಜಿಲ್ ಹಾಗೂ ಚತ್ತೀಸ್‌ಗಢದಿಂದ ತಂದು ಅದಿರು ಉಂಡೆಗಳನ್ನು ಮಾಡಿ ಚೀನಾ, ಜಪಾನ್, ದಕ್ಷಿಣ ಕೊರಿಯಾ, ವಿಯೆಟ್ನಾಂ, ಇರಾನ್‌ಗೆ 10.33 ಲಕ್ಷ ಟನ್ ರಫ್ತು ಮಾಡಲಾಗಿದೆ. 7.3 ಲ್ಷ ಟನ್ ಕಬ್ಬಿಣವನ್ನು ಆಂತರಿಕ ಬಳಕೆ ಮಾಡಲಾಗಿದೆ. ಮುಂದಿನ ದಿನಳಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಉಂಟೆ ತಯಾರಿ ಘಟವನ್ನು ಮೇಲ್ದರ್ಜೆಗೆ ಏರಿಸಲಾುವುದು. ಊದು ಕುಲುಮೆಯನ್ನು ಪುನರ್‌ ನಿರ್ಮಾಣ ಮಾಡಲಾಗುವುದು. ಸಧ್ಯಕ್ಕೆ ಕಾರ್ಯ ಸ್ಥಗಿತವಾಗಿರುವ ಮೃದು ಕಬ್ಬಿಣ ಉತ್ಪಾದನಾ ಘಟಕಕ್ಕೆ ಮತ್ತೆ ಚಾಲನೆ ನೀಡಲಾಗುವುದು ಎಂದು ಅವರು ವಿವರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News