ಕೈರಂಗಳ: ಸಾರ್ವಜನಿಕ ಬಸ್ ತಂಗುದಾಣ ಉದ್ಘಾಟನೆ.
ಉಳ್ಳಾಲ, ಜ.6: ಅಲ್-ಅಮೀನ್ ಫ್ರೆಂಡ್ಸ್ ಕೈರಂಗಳ ಇದರ 6ನೆ ವರ್ಷದ ನೆನಪಿಗಾಗಿ ನರಿಂಗಾನ ಗ್ರಾಮದ ಡಿ.ಜಿ ಕಟ್ಟೆಯಲ್ಲಿ ನಿರ್ಮಿಸಿದ ಸಾರ್ವಜನಿಕ ಬಸ್ ತಂಗುದಾಣವನ್ನು ತೋಟಾಲ್ ಜುಮಾ ಮಸೀದಿಯ ಖತೀಬ ಮುಹಿಯ್ಯದ್ದೀನ್ ಸಅದಿ ಉದ್ಘಾಟಿಸಿದರು.
ಕರ್ನಾಟಕ ಬ್ಯಾಂಕ್ ಕೈರಂಗಳ ಶಾಖೆಯ ವ್ಯವಸ್ಥಾಪಕ ವಾಸುದೇವ್, ಬಿಜೆಪಿ ಮಂಗಳೂರು ವಿಧಾನ ಸಭಾ ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ದ.ಕ.ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎ.ಎ ಹೈದರ್ ಪರ್ತಿಪ್ಪಾಡಿ, ಡಾ.ಎಸ್.ಎಸ್ ರಾಮ್, ಸಮಾಜ ಸೇವಕ ಹಾಜಿ ಎನ್.ಎಸ್ ಉಮರ್ ಸಿದ್ದೀಕ್ ಸುಟ್ಟ, ನರಿಂಗಾನ ಗ್ರಾಪಂ ಸದಸ್ಯರಾದ ಸಿ.ಎಚ್ ರಹಿಮಾನ್ ಚಂದಹಿತ್ಲು, ಫಯಾಝ್ ಮೊಂಟೆಪದವು, ಮುರಳೀಧರ್ ಶೆಟ್ಟಿ, ಮುಡಿಪು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಲೀಲ್ ಮೋಂಟುಗೋಳಿ, ತೋಟಾಲ್ ಜುಮಾ ಮಸೀದಿಯ ಅಧ್ಯಕ್ಷ ಟಿ.ಎಸ್ ಇಸ್ಮಾಯೀಲ್ ಹಾಜಿ, ಅಲ್-ಅಮೀನ್ ನ ಗೌರವಾಧ್ಯಕ್ಷ ಅಹ್ಮದ್ ಕುಂಞಿ, ರಿಫಾಯಿಯ್ಯಾ ಮಸೀದಿಯ ಅಧ್ಯಕ್ಷ ಹೈದರ್ ಅಲಿ, ಉದ್ಯಮಿ ಹಸನ್ ಹಾಜಿ ಸಾಂಬಾರತೋಟ, ಬಿಜೆಪಿ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಮುನೀರ್ ಮಾಸ್ಟರ್ ಕೈರಂಗಳ, ಯುವ ಕಾಂಗ್ರೆಸ್ ಕೈರಂಗಳ ಸಮಿತಿಯ ಅಧ್ಯಕ್ಷ ಸತ್ತಾರ್ ಕೈರಂಗಳ, ಸ್ಥಳೀಯರಾದ ಲೋಹಿತ್ ಗಟ್ಟಿ, ಸಿ.ಎಂ. ಶರೀಫ್ ಪಟ್ಟೋರಿ, ಜನಾರ್ದನ್ ಕುಲಾಲ್, ಸೂರ್ಯ ನಾರಾಯಣ ಭಟ್, ರೋಬರ್ಟ್ ಡಿಸೋಜ, ಮೊಯ್ದಿನ್ ಬನೋಟ್, ರುಕ್ಮಯ್ಯ, ಕರವೇ ಕೈರಂಗಳ ಘಟಕದ ಅಧ್ಯಕ್ಷ ಅಬೂಸಾಲಿಹ್, ಲೇಖಕ ಸಿ.ಐ. ಇಸಾಕ್ ಫಜೀರ್, ಅಲ್-ಅಮೀನ್ ಫ್ರೆಂಡ್ಸ್ ಕೈರಂಗಳ ಅಧ್ಯಕ್ಷ ಶರೀಫ್ ಕೈರಂಗಳ ಮತ್ತಿತರರು ಉಪಸ್ಥಿತರಿದ್ದರು.
ತಾಪಂ ಸದಸ್ಯ ಹೈದರ್ ಕೈರಂಗಳ ಪ್ರಾಸ್ತಾವಿಕ ಭಾಷಣ ಮಾಡಿದರು. ಅಲ್-ಅಮೀನ್ ಫ್ರೆಂಡ್ಸ್ನ ನಿರ್ದೇಶಕ ಇಕ್ಬಾಲ್ ಕೈರಂಗಳ ಸ್ವಾಗತಿಸಿದರು. ಅಕ್ಬರ್ ಜಲ್ಲಿ ವಂದಿಸಿದರು.