ಅಡ್ಡೂರು ಶಾಲೆಗೆ ವಾಟರ್ ಫಿಲ್ಟರ್ ಕೊಡುಗೆ
Update: 2018-01-06 20:18 IST
ಮಂಗಳೂರು, ಜ.6: ಪಿಎಫ್‌ಐ ಅಡ್ಡೂರು ಫಟಕದ ವತಿಯಿಂದ ಅಡ್ಡೂರು ಸರಕಾರಿ ಶಾಲಾ ಮಕ್ಕಳಿಗೆ ಕೊಡುಗೆಯಾಗಿ ಶುದ್ಧ ಕುಡಿಯುವ ನೀರಿನ ವಾಟರ್ ಫಿಲ್ಟರ್‌ನ್ನು ಘಟಕದ ಅಧ್ಯಕ್ಷ ಹಕೀಮ್ ಪಾಂಡೇಲ್ ವಿತರಿಸಿದರು.
ಈ ಸಂದರ್ಭ ಪಿಎಫ್‌ಐ ವಲಯ ಪ್ರಧಾನ ಕಾರ್ಯದರ್ಶಿ ಅಶ್ರಫ್ ನಡುಗುಡ್ಡೆ, ಅಡ್ಡೂರು ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಎಂ. ಮುಹಮ್ಮದ್ ಶರೀಫ್, ಎಸ್‌ಡಿಪಿಐ ಅಡ್ಡೂರು ಗ್ರಾಮ ಸಮಿತಿಯ ಅಧ್ಯಕ್ಷ ಎ.ಕೆ. ಮುಸ್ತಫಾ,ದ.ಕ.ಜಿಪಂ ಸದಸ್ಯ ಯು.ಪಿ.ಇಬ್ರಾಹಿಂ,ಗ್ರಾಪಂ ಸದಸ್ಯ ಟಿ.ಅಹ್ಮದ್ ಬಾವ,ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಸಿದ್ದೀಕ್ ಕೆಳಗಿನಕೆರೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎ.ಕೆ.ರಿಯಾಝ್, ಹೈದರ್ ಕೆಳಗಿನಕೆರೆ, ಅನ್ವರ್ ಗೋಳಿಪಡ್ಪು, ಇಮ್ತಿಯಾಝ್ ಬೊಟ್ಟಿಕ್ಕೆರೆ, ಶಂಶುದ್ದೀನ್ ಮತ್ತಿತರರು ಉಪಸ್ಥಿತರಿದ್ದರು.