ಪಡುಬಿದ್ರೆ: ಅಕ್ರಮ ಮರಳು ಸಾಗಾಟ ಲಾರಿ ವಶ
ಪಡುಬಿದ್ರೆ, ಜ. 6: ಇಲ್ಲಿನ ಠಾಣಾ ವ್ಯಾಪ್ತಿಯ ಹೆಜಮಾಡಿಯಲ್ಲಿ ಅಕ್ರಮ ಮರಳು ಸಾಗಾಟ ಮಾಡುತಿದ್ದ ಲಾರಿಯೊಂದನ್ನು ಪಡುಬಿದ್ರೆ ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.
ಇಂದು ಬೆಳಗ್ಗೆ ಹೆಜಮಾಡಿ ಗ್ರಾಮದ ಕಡವಿನಬಾಗಿಲು ರಸ್ತೆ ಬಳಿ ಪಡುಬಿದ್ರೆ ಠಾಣಾಧಿಕಾರಿ ಸತೀಶ್ ತಪಾಸಣೆಗಾಗಿ ಲಾರಿಯೊಂದನ್ನು ನಿಲ್ಲಿಸಿದಾಗ ಚಾಲಕ ಲಾರಿಯನ್ನು ರಸ್ತೆಯಲ್ಲಿಯೇ ಬಿಟ್ಟು ಪರಾರಿಯಾಗಿದ್ದ. ವಾಹನ ಪರಿಶೀಲಿಸಿದಾಗ ಅದರಲ್ಲಿ ಮರಳು ತುಂಬಿರುವುದು ಪತ್ತೆಯಾಗಿದೆ. ಈ ವಾಹನವು ಕುತ್ಯಾರು ಗ್ರಾಮದ ಸಂತೋಷ್ ಎಂಬವರಿಗೆ ಸೇರಿದ್ದು ಎಂದು ದಾಖಲೆ ಪರಿಶೀಲನೆ ವೇಳೆ ತಿಳಿದುಬಂತು. ವಾಹನವನ್ನು ಪೊಲೀಸ್ ಠಾಣೆ ಅವರಣಕ್ಕೆ ತಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೋದಂಡರಾಮಯ್ಯ ಅವರು ಪರಿಶೀಲಿಸಿದಾಗ, ವಾಹನದಲ್ಲಿ ಮೂರು ಮೆಟ್ರಿಕ್ ಟನ್‌ನಷ್ಟು ಮರಳು ಸಾಗಾಟ ತುಂಬಲಾಗಿತ್ತು. ಅಕ್ರಮವಾಗಿ ಮರಳು ಸಾಗಾಟ ಮಾಡಿರುವುದು ಕಂಡು ಬಂದಿದ್ದು, ವಾಹನ ಮತ್ತು ಮರಳನ್ನು ಸ್ವಾದೀನ ಪಡಿಸಿಕೊಂಡಿರುವ ಪಡುಬಿದ್ರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.