ಉಡುಪಿ ರಂಗಭೂಮಿ ನಾಟಕೋತ್ಸವ ಉದ್ಘಾಟನೆ
Update: 2018-01-06 22:32 IST
ಉಡುಪಿ, ಜ.6: ಉಡುಪಿ ರಂಗಭೂಮಿಯ ಆಶ್ರಯದಲ್ಲಿ ಉಡುಪಿ ಎಂಜಿಎಂ ಕಾಲೇಜು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರ ದೊಂದಿಗೆ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಹಮ್ಮಿಕೊಳ್ಳಲಾದ ಎರಡು ದಿನಗಳ ನಾಟಕೋತ್ಸವವನ್ನು ಸಮಾಜ ಸೇವಕ ಯು.ವಿಶ್ವನಾಥ ಶೆಣೈ ಡೋಲು ಬಾರಿಸುವ ಮೂಲಕ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಮಂಗಳೂರು ವಿವಿ ಸೆನೆಟ್ ಸದಸ್ಯ ಅಮೃತ್ ಶೆಣೈ, ಕೋಟೇಶ್ವರ ಝೈಬ್ ಕ್ರಿಯೇಶನ್‌ನ ಆಸ್ಮಾ ಮಾತನಾಡಿದರು. ರಂಗಭೂಮಿ ಉಪಾಧ್ಯಕ್ಷ ಎಂ.ನಂದಕುಮಾರ್, ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾಗಿದ್ದ ಯು. ಉಪೇಂದ್ರ ಹಾಗೂ ಕೋಶಾಧಿಕಾರಿಯಾಗಿದ್ದ ಯು.ದುಗ್ಗುಪ್ಪ ಅವರಿಗೆ ನುಡಿ ನಮನ ಸಲ್ಲಿಸಲಾಯಿತು.
ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ರವಿರಾಜ್ ಎಚ್.ಪಿ. ಕಾರ್ಯಕ್ರಮ ನಿರೂಪಿಸಿದರು. ಬಳಿಕ ರಂಗಭೂಮಿಯ ಈ ವರ್ಷದ ಹೊಸ ನಾಟಕ ‘ಐ.ಸಿ.ಯು. ನೋುವೆ ನಿನ್ನ’ ಪ್ರದರ್ಶನಗೊಂಡಿತು.