ದ.ಕ. ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಸಾರಿಗೆ ಸಚಿವರ ಭೇಟಿ
Update: 2018-01-06 22:46 IST
ಮಂಗಳೂರು, ಜ. 6: ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಕರ್ನಾಟಕ ಸರಕಾರದ ಸಾರಿಗೆ ಸಚಿವ ಶ್ರೀ ಎಚ್. ಎಂ. ರೇವಣ್ಣ ಶನಿವಾರ ಮಧ್ಯಾಹ್ನ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಎರಡು ಕೋಮುವಾದಿ ಶಕ್ತಿಗಳು ಚುನಾವಣೆ ಸಂದರ್ಭದಲ್ಲಿ ಸಾಮರಸ್ಯ ಹಾಳು ಮಾಡಲು ಪ್ರಯತ್ನ ನಡೆಸುತ್ತಿವೆ. ಜನರು ವದಂತಿಗಳಿಗೆ ಕಿವಿಗೊಡದೆ ಶಾಂತಿಯನ್ನು ಕಾಪಾಡಬೇಕು ಎಂದು ಸಚಿವರು ಜನತೆಯಲ್ಲಿ ಮನ ಮಾಡಿದರಲ್ಲದೆ, ಸರಕಾರ ಯಾವುದೇ ಮತೀಯವಾದವನ್ನು ಸಹಿಸುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಉಪಾಧ್ಯಕ್ಷ ಅಬೂಬಕರ್ ಕುದ್ರೋಳಿ, ಭಾಸ್ಕರ್ ಮೊಲಿ, ಕಾರ್ಯದರ್ಶಿ ಚೇತನ್ ಬೆಂಗ್ರೆ, ನಝೀರ್ ಬಜಾಲ್, ನೀರಜ್ ಪಾಲ್, ಪ್ರೇಮ್ ಬಳ್ಳಾಲ್‌ಭಾಗ್, ಮುಹಮ್ಮದ್ ಬಪ್ಪಳಿಗ ಉಪಸ್ಥಿತರಿದ್ದರು.
ಸದಾಶಿವ ಉಳ್ಳಾಲ್ ಸ್ವಾಗತಿಸಿದರು. ಟಿ.ಕೆ ಸುಧೀರ್ ವಂದಿಸಿದರು.