ಟ್ರಂಪ್ ಟ್ವೀಟ್ ಗಳ ಮೇಲೆ ನಿರ್ಬಂಧ ಹೇರಬೇಕು ಎನ್ನುವ ಒತ್ತಾಯಕ್ಕೆ ಟ್ವಿಟರ್ ಪ್ರತಿಕ್ರಿಯಿಸಿದ್ದು ಹೀಗೆ…

Update: 2018-01-06 17:26 GMT

ಸ್ಯಾನ್‌ಫ್ರಾನ್ಸಿಸ್ಕೊ (ಅಮೆರಿಕ), ಜ. 6: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಟ್ವೀಟ್‌ಗಳು ಸೇವಾ ಶರತ್ತುಗಳನ್ನು ಉಲ್ಲಂಘಿಸುವುದಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ತಳ್ಳಿಹಾಕಿರುವ ಟ್ವಿಟರ್, ಟ್ರಂಪ್ ಓರ್ವ ಜಾಗತಿಕ ನಾಯಕರಾಗಿರುವುದರಿಂದ ಅವರ ಟ್ವೀಟ್‌ಗಳನ್ನು ತಾನು ತಡೆಯುವುದಿಲ್ಲ ಎಂದಿದೆ.

ಟ್ವಿಟರ್‌ನಲ್ಲಿ ರಾಜಕೀಯ ವ್ಯಕ್ತಿಗಳು ಮತ್ತು ಜಾಗತಿಕ ನಾಯಕರ ಬಗ್ಗೆ ಬಹಳಷ್ಟು ಮಾತುಕತೆಗಳು ನಡೆದಿವೆ ಎಂದು ‘ವರ್ಲ್ಡ್ ಲೀಡರ್ಸ್ ಆನ್ ಟ್ವಿಟರ್’ ಎಂಬ ಬ್ಲಾಗ್ ಪೋಸ್ಟ್‌ನಲ್ಲಿ ಕಂಪೆನಿ ಶುಕ್ರವಾರ ಹೇಳಿದೆ.

 ‘‘ಓರ್ವ ಜಾಗತಿಕ ನಾಯಕನನ್ನು ಟ್ವಿಟರ್‌ನಿಂದ ನಿರ್ಬಂಧಗೊಳಿಸುವುದರಿಂದ ಅಥವಾ ಅವರ ವಿವಾದಾಸ್ಪದ ಟ್ವೀಟ್‌ಗಳನ್ನು ತೆಗೆದುಹಾಕುವುದರಿಂದ ಮಹತ್ವದ ಮಾಹಿತಿಗಳನ್ನು ಜನರಿಂದ ಮುಚ್ಚಿಟ್ಟಂತಾಗುತ್ತದೆ. ಇದರಿಂದಾಗಿ ಅವರಿಗೆ ಈ ಬಗ್ಗೆ ಚರ್ಚೆ ನಡೆಸಲು ಸಾಧ್ಯವಾಗುವುದಿಲ್ಲ’’ ಎಂದು ಟ್ವಿಟರ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News