×
Ad

ಪಿಎಫ್ಐ ಫರಂಗಿಪೇಟೆ ವತಿಯಿಂದ 'ಪ್ರವಾದಿ ಚರ್ಯೆ, ಪ್ರಸಕ್ತ ಸನ್ನಿವೇಶ' ಸಾರ್ವಜನಿಕ ಕಾರ್ಯಕ್ರಮ

Update: 2018-01-06 23:10 IST

ಫರಂಗಿಪೇಟೆ, ಜ. 6: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಫರಂಗಿಪೇಟೆ ವಲಯದ ವತಿಯಿಂದ ಶನಿವಾರ ಫರಂಗಿಪೇಟೆಯಲ್ಲಿ ಪ್ರವಾದಿ ಚರ್ಯೆ ಮತ್ತು ಪ್ರಸಕ್ತ ಸನ್ನಿವೇಶ ಎಂಬ ವಿಷಯದಲ್ಲಿ ಪ್ರವಚನ ನಡೆಯಿತು.

ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ಕೇರಳ ರಾಜ್ಯ ಸಮಿತಿ ಸದಸ್ಯ ಹಾಫಿಲ್ ಅಫ್ಸಲ್ ಕಾಸಿಮಿ ಕೊಲ್ಲಮ್ ಕೇರಳ ಮುಖ್ಯ ಭಾಷಣ ಮಾಡಿ ಗತ ಕಾಲದ ಇಸ್ಲಾಮಿ ಚರಿತ್ರೆಯಲ್ಲಿ ಆದುನಿಕ ಮುಸ್ಲಿಮರು ಎದುರಿಸುತ್ತಿರುವ ಸಕಲ ಸಂಕಷ್ಟಗಳಿಗೆ ಪರಿಹಾರ ಮಾರ್ಗ ಇದೆ, ದೇಶದಲ್ಲಿ ಮುಸ್ಲಿಮರು ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಮುಸ್ಲಿಮರು ಬಯಸಿದರೆ ಚರಿತ್ರೆ ಕಳಿಸುತ್ತದೆ ಇಲ್ಲಿಯ ಎಲ್ಲಾ ಶೋಶಿತ ವರ್ಗದ ಜನರಿಗೂ ನಿರ್ಭೀತಿಯಿಂದ ಜೀವಿಸಲು ಅವಕಾಶ ಮಾಡಿ ಕೊಡಲು ಸಾದ್ಯವಿದೆ, ನಿರ್ಭಯದಿಂದ ಇಸ್ಲಾಂ ಧರ್ಮವನ್ನು ನೆಲೆ ಸ್ಥಾಪಿಸಿ ದೀನಿ ಸ್ನೇಹದಿಂದ ಐಕ್ಯರಾಗಿರಿ ಇದು ಈ ಕಾಲದ ಬೇಡಿಕೆ. ಶತಮಾನದ ಹಿಂದಿನದ ದಿನಗಳಲ್ಲಿ ದಜ್ಜಾಲ್ ನಂತಹ ಶತ್ರುವನ್ನು ಕಂಡ ಇಸ್ಲಾಂ ಗೆ ಆದುಣಿಕ ಶತ್ರುಗಳ ಭಯವೇಕೆ? ಪ್ರತಿಯೊಂದು ಮಸೀದಿ ಹಾಗೂ ಜಮಾಅತ್ ಗಳಲ್ಲಿ ದೀನಿ ಸ್ಥಾಪನೆ ನೆಲೆಗೊಳ್ಳಲಿ. ರಕ್ತ ಸಾಕ್ಷಿಯಾದವರು ಎಂದಿಗೂ ಸೋಲುವುದಿಲ್ಲ. ಅವರ ಸಾವು ವ್ಯರ್ಥವಾಗದು. ನಮ್ಮ ನಡುವೆ ಇರುವ ಭಿನ್ನಾಭಿಪ್ರಾಯಗಳು ಶತ್ರುಗಳಿಗೆ ಆಹಾರವಾಗಿ ಬಿಟ್ಟಿವೆ. ಇದರಿಂದ ಅಮಾಯಕ ಮುಸ್ಲಿಮರ ಕೊಲೆ, ಅತ್ಯಾಚಾರ ನಡೆಯುತ್ತಿದೆ ಎಂದು ಹೇಳಿದರು.

ಸಭಾ ಅಧ್ಯಕ್ಷತೆಯನ್ನು ಪಿ.ಎಫ್.ಐ ಫರಂಗಿಪೇಟೆ ವಲಯಾಧ್ಯಕ್ಷ ನಝೀರ್ ಹತ್ತನೇ ಮೈಲ್ ಕಲ್ಲು ವಹಿಸಿದ್ದರು, ಪ್ರಾಸ್ತಾವಿಕವಾಗಿ ಪಿ.ಎಫ್.ಐ ಬಿಸಿರೋಡ್ ವಲಯಾಧ್ಯಕ್ಷ ಇಮ್ತಿಯಾಝ್ ವಹಿಸಿದ್ದರು, ಉದ್ಘಾಟನೆಯನ್ನು ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ಜಿಲ್ಲಾಧ್ಯಕ್ಷ ರಫೀಕ್ ದಾರಿಮಿ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಪಿ.ಎಫ್.ಐ ಬಂಟ್ವಾಳ ತಾಲೂಕು ಅಧ್ಯಕ್ಷ ಇಜಾಝ್ ಅಹಮದ್, ಪ್ರಧಾನ ಕಾರ್ಯದರ್ಶಿ ಸೆಲೀಮ್ ಕುಂಪನಮಜಲ್, ಮೊಹಿದ್ದೀನ್ ಜುಮ್ಮಾ ಮಸೀದಿ ಫರಂಗಿಪೇಟೆ ಅಧ್ಯಕ್ಷ ಮುಹಮ್ಮದ್ ಬಾವ, ಬದ್ರಿಯಾ ಮಸೀದಿ ಅಮೆಮಾರ್ ಅಧ್ಯಕ್ಷ ಉಮರಬ್ಬ, ಖಿಳ್ರಿಯ್ಯಾ ಮದರಸ ವಳವೂರು ಅಧ್ಯಕ್ಷ ಸಾವುಞಿ, ಬದ್ರಿಯ್ಯೀನ್ ಜುಮ್ಮಾ ಮಸೀದಿ ಮಾರಿಪ್ಪಳ್ಳ ಉಪಾಧ್ಯಕ್ಷ ಕೆ ಬಾವ, ಅರಫಾ ಜುಮ್ಮಾ ಮಸೀದಿ ಕುಂಪಣಮಜಲ್ ಉಪಾಧ್ಯಕ್ಷ ಕೆ.ಎಮ್ ಬುಖಾರಿ, ಹೈದ್ರೋಸಿಯಾ ಜುಮ್ಮಾ ಮಸೀದಿ ಕಾರ್ಯದರ್ಶಿ ಎಸ್ ಇಬ್ರಾಹಿಮ್, ಮೌಲಾ ಮಸ್ಜಿದ್ ಜಲಾಲಿಯಾ ನಗರ ಉಪಾಧ್ಯಕ್ಷ ಕರೀಮ್, ಅಜುಬ ಬ್ರದರ್ಸ್ ಅಮೆಮಾರ್ ಅಧ್ಯಕ್ಷ ಸಿದ್ದೀಕ್ ಎಮ್.ಎಸ್, ಪುದು ಗ್ರಾಪಂ ಸದಸ್ಯ ಸುಲೈಮಾನ್ ಉಸ್ತಾದ್, ತರ್ಬೀಯತುಲ್ ಅತ್ಫಾಲ್ ಮದರಸ ಹತ್ತನೇಮೈಲ್ ಕಲ್ಲು ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್, ನೂರುಲ್ ಹುದಾ ಮದರಸ ಕೋಡಿಮಜಲ್ ಅಧ್ಯಕ್ಷ ಮುಹಮ್ಮದ್ ಸಿರಾಜಿ, ಕಂಝಲ್ ಮಸಾಕೀನ್ ಕುಂಪನಮಜಲ್ ಅಧ್ಯಕ್ಷ ರಿಯಾಝ್ ಕುಂಪನಮಜಲ್, ನಸಾತುದ್ದೀನ್ ಯಂಗ್ ಫೆಡರೇಶನ್ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್, ಕುವ್ವತುಲ್ ಇಸ್ಲಾಮ್ ಎಸೋಸಿಯೇಶನ್ ಮಾರಿಪ್ಪಳ್ಳ ಪ್ರಧಾನ ಕಾರ್ಯದರ್ಶಿ ಫಲುಲ್ ಅಹಮದ್ ಉಪಸ್ಥಿತರಿದ್ದರು.

ಜಝೀರ್ ಕಿರಾಅತ್ ಪಠಿಸಿದರು. ಶರೀಫ್ ಅಮೆಮಾರ್ ಸ್ವಾಗತಿಸಿ, ಕಾದರ್ ಅಮೆಮಾರ್ ಕಾರ್ಯಕ್ರಮ ನಿರೂಪಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News