×
Ad

ಹೆಣದ ಮೇಲಿನ ರಾಜಕೀಯ ಕೈಬಿಡಿ: ಸಿದ್ದರಾಮಯ್ಯ

Update: 2018-01-07 11:29 IST

ಬೆಳ್ತಂಗಡಿ, ಜ.7: ಮಾನವ ದ್ವೇಷಿಗಳಿಂದ ಹತ್ಯೆಗಳು ನಡೆಯುತ್ತಿವೆ. ಬುದ್ಧಿವಂತರ ಜಿಲ್ಲೆಯೆಂದು ಹೇಳಲಾಗುವ ದ.ಕ. ಜಿಲ್ಲೆಯಲ್ಲಿ ಕೆಲವರು ಹೆಣದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಇದನ್ನು ಕೈಬಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ದ.ಕ. ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ, ಶಿಲಾನ್ಯಾಸ ನೆರವೇರಿಸುವುದಕ್ಕಾಗಿ ಇಂದು ಪೂರ್ವಾಹ್ನ ಬೆಳ್ತಂಗಡಿಯ ಹೆಲಿಪ್ಯಾಡಿನಲ್ಲಿ ಬಂದಿಳಿದ ಅವರು ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಶೀರ್ ಬಲಿಯಾಗಿರುವ ವಿಚಾರಕ್ಕೆ ಸಂಬಂಧಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

 ಕೋಮುವಾದಿಗಳಿಂದ ಬಶೀರ್ ಅವರ ಹತ್ಯೆ ನಡೆದಿದೆ. ಕರಾವಳಿಯಲ್ಲಿ ಇಂತಹ ಘಟನೆಗಳು ಆಗುತ್ತಿರುವುದು ಬೇಸರ ತರಿಸಿದೆ. ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಸಂತ್ರಸ್ತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದವರು ತಿಳಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News