ಆಸ್ಪತ್ರೆಯಿಂದ ಮನೆಗೆ ಬಶೀರ್ ಮೃತದೇಹ ರವಾನೆ
ಮಂಗಳೂರು, ಜ.7: ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾಗಿರುವ ಬಶೀರ್(47) ಮೃತದೇಹವನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಯಿಂದ ಅಪರಾಹ್ನ 2:15ರ ಸುಮಾರಿಗೆ ಆಕಾಶಭವನದಲ್ಲಿರುವ ಮನೆಗೆ ಕೊಂಡೊಯ್ಯಲಾಗುತ್ತಿದೆ.
ಆಕಾಶ ಭವನದಲ್ಲಿರುವ ಬಶೀರ್ ಅವರ ನಿವಾಸಕ್ಕೆ ಮೃತದೇಹವನ್ನು ಹೊತ್ತ ಆ್ಯಂಬುಲೆನ್ಸ್ ಹೊರಟಿದೆ. ಇಲ್ಲಿ ಮಹಿಳೆಯರಿಗೆ ಮೃತದೇಹದ ಅಂತಿಮ ದರ್ಶನದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಬಳಿಕ ಮೃತದೇಹವನ್ನು ಕೂಳೂರು-ಪಂಜಿಮೊಗರುವಿನ ಮುಹಿಯುದ್ದೀನ್ ಜುಮಾ ಮಸೀದಿಗೆ ಕೊಂಡೊಯ್ಯಲಾಗುತ್ತದೆ. ಅಲ್ಲಿ ಪುರುಷರಿಗೆಲ್ಲ ಮೃತದೇಹದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಆ ಬಳಿಕ ಮಸೀದಿ ವಠಾರದಲ್ಲಿ ದಫನ ಕಾರ್ಯ ನೆರವೇರಲಿದೆ.
ಈ ನಡುವೆ ಬಶೀರ್ ಅವರ 2ನೇ ಪುತ್ರ ಇರ್ಶಾನ್ ಮಧ್ಯಾಹ್ನ ವೇಳೆ ಅಬುಧಾಬಿಯಿಂದ ಹೊರಟಿದ್ದಾರೆ. ಸ್ಪೈಸ್ ಜೆಟ್ ವಿಮಾನದಲ್ಲಿ ಅಬುಧಾಭಿಯ ಕಾಲಮಾನ 12:50ಕ್ಕೆ ಹೊರಟಿರುವ ಅವರು, 5:05ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದ್ದಾರೆ. 5:45ರ ಸುಮಾರಿಗೆ ಮನೆ ಸೇರುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.