ಮಂಗಳೂರು ತಲುಪಿದ ಮೃತ ಬಶೀರ್ ಅವರ ಪುತ್ರ ಇರ್ಶಾನ್
Update: 2018-01-07 18:52 IST
ಮಂಗಳೂರು, ಜ.7: ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾಗಿರುವ ಬಶೀರ್(47) ಅವರ 2ನೇ ಪುತ್ರ ಇರ್ಶಾನ್ ಮಧ್ಯಾಹ್ನ ವೇಳೆ ಅಬುಧಾಬಿಯಿಂದ ಹೊರಟಿದ್ದು, ಇದೀಗ ಅವರು ಮಂಗಳೂರಿಗೆ ತಲುಪಿದ್ದಾರೆ.
ಮೃತದೇಹವನ್ನು ಮಂಗಳೂರಿನ ಆಸ್ಪತ್ರೆಯಿಂದ ಆಕಾಶಭವನದಲ್ಲಿರುವ ಮನೆಗೆ ಕೊಂಡೊಯ್ಯಲಾಗಿದೆ. ಇರ್ಶಾನ್ ಅವರು ತಂದೆಯ ಅಂತಿಮ ದರ್ಶನ ಪಡೆದ ಬಳಿಕ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.