×
Ad

ರಂಗಭೂಮಿಯಿಂದ ಸಮಾಜ ಹುಟ್ಟುತ್ತದೆ: ಕೆ.ವಿ.ಅಕ್ಷರ

Update: 2018-01-07 21:36 IST

ಉಡುಪಿ, ಜ.7: ಸಮಾಜದಿಂದ ರಂಗಭೂಮಿ ಹುಟ್ಟುವುದಿಲ್ಲ. ಆದರೆ ರಂಗಭೂಮಿಯಿಂದ ಸಮಾಜ ಹುಟ್ಟುತ್ತದೆ ಎಂದು ಹಿರಿಯ ರಂಗಕರ್ಮಿ ಕೆ.ವಿ.ಅಕ್ಷರ ಹೇಳಿದ್ದಾರೆ.

ಉಡುಪಿ ರಂಗಭೂಮಿಯ ಆಶ್ರಯದಲ್ಲಿ ಉಡುಪಿ ಎಂಜಿಎಂ ಕಾಲೇಜು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ರವಿವಾರ ಆಯೋಜಿಸಲಾದ 38ನೆ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯ ಬಹುಮಾನ ವಿತರಣೆ ಸಮಾರಂಭದಲ್ಲಿ ‘ರಂಗಕಲಾ ವಾರಿಧಿ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡುತಿದ್ದರು.

ಸಂಸ್ಥೆಗಳನ್ನು ಒಟ್ಟಿಗೆ ತರುವ ಕೆಲಸವನ್ನು ರಂಗಭೂಮಿ ಮಾಡುತ್ತದೆ. ರಂಗ ಭೂಮಿ ಪ್ರೇಕ್ಷಕರ ಜೊತೆ ಸಂವಹನ, ಪ್ರೀತಿ, ಜಗಳ ಎಲ್ಲವನ್ನು ಕೂಡ ಹಂಚಿ ಕೊಳ್ಳುವ ಮಾಧ್ಯಮವಾಗಿದೆ. ರಂಗಭೂಮಿಯಂತಹ ಸಂಸ್ಥೆಗಳು ಇಂದು ರಂಗ ಭೂಮಿಯನ್ನು ಜೀವಂವಾಗಿರಿಸಿದೆ ಎಂದು ಅವರು ತಿಳಿಸಿದರು.

ಶಿಕ್ಷಣ ತಜ್ಞ ಮಹಾಬಲೇಶ್ವರ ರಾವ್ ಸಂಸ್ಥೆಯ ಸ್ಮರಣ ಸಂಚಿಕೆ ಕಲಾಂಜಲಿ ಬಿಡುಗಡೆಗೊಳಿಸಿದರು. ಹಿರಿಯ ಚಿಂತಕ ಜಿ.ರಾಜಶೇಖರ್ ಮಾತನಾಡಿದರು. ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು.

ಗೌರವಾಧ್ಯಕ್ಷ ಡಾ.ಎಚ್.ಶಾಂತಾರಾಮ್ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಉಪಾಧ್ಯಕ್ಷ ಎಂ.ನಂದಕುಮಾರ್ ಸ್ವಾಗತಿಸಿದರು. ಪ್ರಧಾನ ಕಾರ್ಯ ದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ನಂತರ ಸ್ಪರ್ಧೆಯ ಪ್ರಥಮ ಬಹುಮಾನಿತ ‘ಸಂದೇಹ ಸಾಮ್ರಾಜ್ಯ’ ನಾಟಕದ ಮರು ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News