×
Ad

ಮುಖ್ಯಮಂತ್ರಿ ಉಡುಪಿ ಕಾರ್ಯಕ್ರಮ: ಪಾರ್ಕಿಂಗ್ ವ್ಯವಸ್ಥೆ

Update: 2018-01-07 22:47 IST

ಉಡುಪಿ, ಜ.7: ಜಿಲ್ಲೆಯ ಬೈಂದೂರು, ಬ್ರಹ್ಮಾವರ ಹಾಗೂ ಕಾಪುವಿನಲ್ಲಿ ಜ.8ರಂದು ನಡೆಯುವ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಧನ ಸಮಾ ವೇಶ ಹಾಗೂ ವಿವಿಧ ಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಮುಖ್ಯಮಂತ್ರಿಗಳು ಬೈಂದೂರು ಅರೆಶಿರೂರು ಹೆಲಿಪ್ಯಾಡ್‌ನಿಂದ ಬೈಂದೂರು ಗಾಂಧಿ ಮೈದಾನಕ್ಕೆ ಆಗಮಿಸಲಿರುವುದರಿಂದ ಬೆಳಗ್ಗೆ 7 ಗಂಟೆ ಯಿಂದ ಮಧ್ಯಾಹ್ನ 1ಗಂಟೆವರೆಗೆ ಬೈಂದೂರು -ಕೊಲ್ಲೂರು ರಾಜ್ಯ ಹೆದ್ದಾರಿಯ ಯಡ್ತರೆ ಜಂಕ್ಷನ್ನಿಂದ ಬೈಂದೂರು ಹೊಸ ಬಸ್ ನಿಲ್ದಾಣದ ವರೆಗೆ ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕದಲ್ಲಿ ವಾಹನ ಪಾರ್ಕಿಂಗ್ ನಿಷೇಧಿಸಲಾಗಿದೆ.

ವಾಹನ ಪಾರ್ಕಿಂಗ್‌ಗೆ ಈ ಕೆಳಗಿನಂತೆ ಸ್ಥಳವನ್ನು ಸೂಚಿಸಲಾಗಿದೆ. ಕಾರ್ಯ ಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಧ್ವಿಚಕ್ರ ವಾಹನ ಪಾರ್ಕಿಂಗ್‌ಗೆ ಬೈಂದೂರು ಶಿವ ದರ್ಶನ್ ಹೋಟೆಲ್ ಎದುಗಡೆ ಜಗನ್ನಾಥ ಶೆಟ್ಟಿಯವರ ಮನೆಯ ಬಳಿ ಇರುವ ಖಾಲಿ ಜಾಗದಲ್ಲಿ ವ್ಯವಸ್ಥೆ ಮಾಡಲಾಗಿದೆ. ಖಾಸಗಿ ಕಾರುಗಳು, ಮಾಧ್ಯಮದವರಿಗೆ ಬೈಂದೂರು ಹೊಸ ಬಸ್ ನಿಲ್ದಾಣದ ಪಕ್ಕದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಸಾರ್ವಜನಿಕರನ್ನು ಕರೆದುಕೊಂಡು ಬರುವ ಬಸ್ಸು ಹಾಗೂ ಟೆಂಪೋಗಳಿಗೆ ಹೊಸ ಬಸ್ ನಿಲ್ದಾಣದ ಎದುರು ರಾ.ಹೆ. 66ರ ಪಶ್ಚಿಮಕ್ಕೆ ಇಳಿಜಾರು ರಸ್ತೆಯಲ್ಲಿ ಮೈಸೂರು ಮಿನರಲ್ಸ್ ಕಛೇರಿ ಪಕ್ಕ(ಮಾಸ್ತಿಕಟ್ಟೆ ದೇವಸ್ಥಾನದ ಎದುರುಗಡೆ) ಹಾಗೂ ಯಡ್ತರೆಯ ಜೆಎನ್‌ಆರ್ ಹಾಲ್ ಸಮೀಪದ ಸ್ಥಳದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸರಕಾರಿ ವಾಹನಗಳಿಗೆ ತಾಲೂಕು ಕಛೇರಿಯ ಕಂಪೌಂಡ್ ಒಳಗೆ ಹಾಗೂ ತಾಲೂಕು ಕಛೇರಿಯ ಹಿಂಭಾಗ ಶಾಸಕರ ಕಛೇರಿಯ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರು ತಹಶೀಲ್ದಾರ್ ಕಛೇರಿಯ ಬರುವ ರಸ್ತೆಯಲ್ಲಿ ಬಾರದೇ ಶ್ಯಾನುಬಾಗ್ ಹೋಟೆಲ್ ಬಳಿಯ ರಸ್ತೆಯಲ್ಲಿ ಹಾಗೂ ಬೈಂದೂರು ಜಂಕ್ಷನ್ ಮಾರ್ಗವಾಗಿ ಬರುವಂತೆ ಸೂಚಿಸಲಾಗಿದೆ.

ಬ್ರಹ್ಮಾವರ ಪಾರ್ಕಿಂಗ್: ಬ್ರಹ್ಮಾವರ ಗಾಂಧಿ ಮೈದಾನದ ಎಡ ಭಾಗದಲ್ಲಿ ಬಾರ್ಕೂರು ಕಡೆಯಿಂದ ಬರುವಂತಹ ಘನ ವಾಹನಗಳಿಗೆ ಮತ್ತು ದ್ವಿಚಕ್ರ ವಾಹನಗಳಿಗೆ, ಪ್ರಣಾವ್ ಆಸ್ಪತ್ರೆ ಪಕ್ಕದಲ್ಲಿರುವ ಖಾಲಿ ಸ್ಥಳದಲ್ಲಿ ದ್ವಿಚಕ್ರ ವಾಹನ ಗಳಿಗೆ, ಹಂದಾಡಿ ಪಂಚಾಯತ್ ಎದುರು ನಾಲ್ಕು ಚಕ್ರದ ವಾಹನಗಳಿಗೆ, ಬ್ರಹ್ಮಾವರ ಹಳೆ ಪೊಲೀಸ್ ಠಾಣೆಯ ಎದುರುಗಡೆ(ಹೋಮ್ ಗಾರ್ಡ ಕಚೇರಿ ಎದುರು) ಇರುವ ಖಾಲಿ ಸ್ಥಳದಲ್ಲಿ ಹೆಬ್ರಿ ಕಡೆಯಿಂದ ಮತ್ತು ಪೇತ್ರಿ ಕಡೆ ಯಿಂದ ಬರುವ ಘನ ವಾಹನಗಳಿಗೆ ಮತ್ತು ದ್ವಿಚಕ್ರ ವಾಹನಗಳಿಗೆ, ಭರಣಿ ಪೆಟ್ರೋಲ್ ಬಂಕ್ ಎದುರುಗಡೆಯಿರುವ ಸರ್ವಿಸ್ ರಸ್ತೆಯಲ್ಲಿ ಕುಂದಾಪುರ ಕಡೆಯಿಂದ ಬರುವಂತಹ ಬಸ್ ಮತ್ತು ಘನ ವಾಹನಗಳಿಗೆ, ಆಶ್ರಯ ಹೊಟೇಲ್ ಬಳಿ ಇರುವ ಖಾಲಿ ಸ್ಥಳ ರಾ.ಹೆ. 66ರಲ್ಲಿ ಉಡುಪಿ ಕಡೆಯಿಂದ ಬರುವಂತಹ ಬಸ್ ಮತ್ತು ಘನವಾಹನಗಳಿಗೆ, ದುರ್ಗಾ ಸಭಾಭವನದ ಬಳಿ ಹಂದಾಡಿ ಸಮೀಪ ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.

ಕಾಪು ಪಾರ್ಕಿಂಗ್: ಕಾಪು ವಿದ್ಯಾನಿಕೇತನ ಸಮೂಹ ಸಂಸ್ಥೆ(ಪಡುಬಿದ್ರೆ ಹಾಗೂ ಶಿರ್ವ ಕಡೆಯಿಂದ ಬರುವ ಘನ ವಾಹನಗಳಿಗೆ), ದಂಡತೀರ್ಥ ಶಾಲಾ ಮೈದಾನದಲ್ಲಿ(ಉಡುಪಿ ಕಡೆಯಿಂದ ಬರುವ ವಾಹನಗಳಿಗೆ), ಹಳೆ ಮಾರಿಗುಡಿ ದೇವಸ್ಥಾನ ವಠಾರದಲ್ಲಿ (ಪಡುಬಿದ್ರೆ ಹಾಗೂ ಶಿರ್ವ ಕಡೆ ಯಿಂದ ಬರುವ ವಾಹನಗಳಿಗೆ) ಘನ ವಾಹನ ಹಾಗೂ 4 ಚಕ್ರದ ವಾಹನಗಳ ನಿಲುಗಡೆ ಅವಕಾಶ ಮಾಡಲಾಗಿದೆ.

ಲಕ್ಷ್ಮೀ ಜನಾರ್ಧನ ದೇವಸ್ಥಾನದ ಕೆರೆಯ ಎದುರುಗಡೆ(ಶಿರ್ವ, ಮಜೂರು, ಬೆಳಪು ಕಡೆಯಿಂದ ಬರುವ), ಹೊಸ ಮಾರಿಗುಡಿ ಎದುರುಗಡೆ(ಉಡುಪಿ ಕಡೆಯಿಂದ ಬರುವ), ಕಾಪು ಪಡುವಿನಲ್ಲಿ ಪಡುಬಿದ್ರೆ ಕಡೆಯಿಂದ ಬರುವ ದ್ವಿಚಕ್ರದ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News