ಕಿಮ್ ಜಾಂಗ್ ಜೊತೆ ಮಾತುಕತೆಗೆ ಸಿದ್ಧ: ಟ್ರಂಪ್

Update: 2018-01-07 17:22 GMT

ವಾಶಿಂಗ್ಟನ್, ಜ. 7: ಕೊರಿಯ ಪರ್ಯಾಯ ದ್ವೀಪದ ಪರಮಾಣು ಬಿಕ್ಕಟ್ಟಿಗೆ ಸಂಬಂಧಿಸಿ, ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ಜೊತೆ ಮಾತುಕತೆ ನಡೆಸಲು ಸಿದ್ಧನಾಗಿದ್ದೇನೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಎರಡು ಕೊರಿಯಗಳ ನಡುವೆ ಈ ವಾರ ನಡೆಯಲಿರುವ ಮಾತುಕತೆಗಳಲ್ಲಿ ಧನಾತ್ಮಕ ಫಲಿತಾಂಶ ಬರಬಹುದು ಎಂಬ ನಿರೀಕ್ಷೆಯನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಯಾವುದೋ ಹಂತದ ಮಾತುಕತೆ ಅಥವಾ ಕಿಮ್ ಜಾಂಗ್ ಉನ್ ಜೊತೆಗಿನ ನೇರ ಸಂಭಾಷಣೆ ಅಸಾಧ್ಯವೇನಲ್ಲ ಎಂದು ಕ್ಯಾಂಪ್ ಡೇವಿಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.

ಉತ್ತರ ಕೊರಿಯದ ಜೊತೆಗೆ ಮಾತುಕತೆ ನಡೆಸಬಹುದಾಗಿದೆ ಎಂಬುದಾಗಿ ಕಳೆದ ವರ್ಷ ಅಭಿಪ್ರಾಯ ವ್ಯಕ್ತಪಡಿಸಿದ್ದ ತನ್ನ ಮುಖ್ಯ ಸಂಧಾನಕಾರನನ್ನು ಟ್ರಂಪ್ ತರಾಟೆಗೆ ತೆಗೆದುಕೊಂಡಿರುವುದನ್ನು ಸ್ಮರಿಸಬಹುದಾಗಿದೆ.

‘‘ಖಂಡಿತ, ನನಗೆ ಮಾತುಕತೆಯಲ್ಲಿ ನಂಬಿಕೆಯಿದೆ’’ ಎಂದು ಟ್ರಂಪ್ ನುಡಿದರು. ‘‘ಅದನ್ನು ನಾನು ಖಂಡಿತವಾಗಿಯೂ ಮಾಡುತ್ತೇನೆ. ಅದರಲ್ಲಿ ನನಗೆ ಯಾವುದೇ ಸಮಸ್ಯೆಯಿಲ್ಲ’’ ಎಂದರು.

ಆದರೆ, ಯಾವುದೇ ಮಾತುಕತೆಗಳಿಗೆ ಶರತ್ತುಗಳಿರುತ್ತವೆ ಎಂದೂ ಅವರು ಹೇಳಿದರು. ಆದರೆ, ಅದೇನೆಂಬುದನ್ನು ವಿವರಿಸಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News