×
Ad

72 ಗುಂಪುಗಳಿಗೆ ದೇಣಿಗೆ ನೀಡದಂತೆ ಜನರಿಗೆ ಪಾಕ್ ಎಚ್ಚರಿಕೆ

Update: 2018-01-07 23:19 IST

ಇಸ್ಲಾಮಾಬಾದ್, ಜ. 7: ಜಮಾಅತುದಅವಾ (ಜೆಯುಡಿ) ಸೇರಿದಂತೆ ನಿಷೇಧಿತ ಅಥವಾ ‘ನಿಗಾ ಪಟ್ಟಿ’ಯಲ್ಲಿರುವ 72 ಗುಂಪುಗಳಿಗೆ ದೇಣಿಗೆ ನೀಡದಂತೆ ಪಾಕಿಸ್ತಾನದ ಅಧಿಕಾರಿಗಳು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

 ಮುಂಬೈ ಭಯೋತ್ಪಾದಕ ದಾಳಿಯ ಸೂತ್ರಧಾರಿ ಹಫೀಝ್ ಸಯೀದ್‌ನ ಜೆಯುಡಿ ಮತ್ತು ಫಲಾಹೆ ಇನ್ಸಾನಿಯತ್ (ಎಫ್‌ಐಎಫ್) ಸಂಘಟನೆಗಳು ಭಯೋತ್ಪಾದಕ ಗುಂಪು ಲಷ್ಕರ್ ಎ ತೊಯ್ಬಾದ ಅಂಗ ಸಂಸ್ಥೆಗಳು ಎಂಬುದಾಗಿ ಘೋಷಿಸಲಾಗಿದೆಯಾದರೂ, ಅವುಗಳನ್ನು ನಿಷೇಧಿಸಲಾಗಿಲ್ಲ. ಆದರೆ, ಅವುಗಳನ್ನು ಆಂತರಿಕ ಭದ್ರತಾ ಸಚಿವಾಲಯದ ‘ನಿಗಾ ಪಟ್ಟಿ’ಯಲ್ಲಿ ಸೇರಿಸಲಾಗಿದೆ.

ಕಪ್ಪು ಪಟ್ಟಿಯಲ್ಲಿರುವ ಯಾವುದೇ ಸಂಘಟನೆಗಳಿಗೆ ಆರ್ಥಿಕವಾಗಿ ಅಥವಾ ಇನ್ನಾವುದೇ ರೂಪದಲ್ಲಿ ನೆರವು ನೀಡುವುದು ಅಪರಾಧವಾಗುತ್ತದೆ ಎಂದು ಹೇಳಿಕೆಯೊಂದರಲ್ಲಿ ಆಂತರಿಕ ಸಚಿವಾಲಯ ತಿಳಿಸಿದೆ.

 ‘‘ಹಾಗಾಗಿ, ಅವುಗಳಿಗೆ ಯಾವುದೇ ರೂಪದಲ್ಲಿ ದಾನ ನೀಡುವುದನ್ನು ಜನರು ನಿಲ್ಲಿಸಬೇಕು. ಬದಲಿಗೆ, ಯಾವುದೇ ಸಂಶಯಾಸ್ಪದ ಚಟುವಟಿಕೆಗಳು ಕಂಡುಬಂದರೆ 1717 ದೂರವಾಣಿ ಸಂಖ್ಯೆಗೆ ತಿಳಿಸಬೇಕು’’ ಎಂದು ಹೇಳಿಕೆ ತಿಳಿಸಿದೆ.

ಇಂಥ ವ್ಯಕ್ತಿಗಳು ಅಥವಾ ಗುಂಪುಗಳಿಗೆ ದೇಣಿಗೆಗಳನ್ನು ನೀಡುವವರು 10 ವರ್ಷಗಳ ಜೈಲು ಶಿಕ್ಷೆ ಅಥವಾ 1 ಕೋಟಿ ರೂಪಾಯಿವರೆಗಿನ ದಂಡ ಅಥವಾ ಎರಡನ್ನೂ ಎದುರಿಸಬೇಕಾಗುತ್ತದೆ ಎಂದು ಸಚಿವಾಲಯ ಎಚ್ಚರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News